ಮಲ್ಪೆ, ಜೂ. 13 (DaijiworldNews/HR): ಯಮುನಾ ಗಂಗಾಧರ ಎಂಬವರು ಕಲ್ಯಾಣಪುರ ಸಮೀಪದ ನೇಜಾರಿನ ತಮ್ಮ ಮನೆಯ ಹತ್ತಿರ ಮೇಯಲು ಬಿಟ್ಟಿದ್ದ ದನದ ಕರುವನ್ನು ಪಕ್ಕದ ಮನೆಯ ವ್ಯಕ್ತಿಯೊಬ್ಬ ಕಳವುಗೈದು ಅದನ್ನು ಹತ್ಯೆ ಮಾಡಿ ಮಾಂಸವನ್ನು ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಮೇಯಲು ಬಿಟ್ಟಿದ್ದ ಕರು ಏಕಾಏಕಿ ನಾಪತ್ತೆಯಾಗಿದ್ದು, ಈ ಬಗ್ಗೆ ನೆರೆ ಮನೆಯ ಇಬ್ರಾಹಿಂ ಅವರನ್ನು ವಿಚಾರಿಸಿದಾಗ ತಾನು ಕರುವನ್ನು ರಸ್ತೆಯಲ್ಲಿ ಬಿಟ್ಟಿರುವುದಾಗಿ ತಿಳಿಸಿದ್ದರು.
ಇನ್ನು ಈ ಬಗ್ಗೆ ಸಮೀಪದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದಾಗ ಅಪರಾಹ್ನ 11:45 ರ ವೇಳೆಗೆ ಇಬ್ರಾಹಿಂ ಅವರು ಕರುವನ್ನು ಎಳೆದುಕೊಂಡು ಹೋಗುತ್ತಿರುವುದು ಸೆರೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.