ಲಕ್ನೋ, ಅ05(SS): ದೇವಾಲಯಗಳನ್ನು ಧ್ವಂಸ ಮಾಡಿ, ಅದೇ ಜಾಗದಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ. ಭಾರತ ದೇಶಕ್ಕೆ ಬಾಬ್ರಿ ಮಸೀದಿ ಈ ದೇಶಕ್ಕೆ ಕಪ್ಪುಚುಕ್ಕೆ. ಅದನ್ನು ಮಸೀದಿ ಎಂದು ಕರೆಯುವುದೇ ಒಂದು ದೊಡ್ಡ ಅಪರಾಧ ಎಂದು ಶಿಯಾ ವಕ್ಫ್ ಬೋರ್ಡ್ ಮುಖಂಡ ವಾಸೀಮ್ ರಿಜ್ವಿ ಹೇಳಿದ್ದಾರೆ.
ಬಾಬ್ರಿ ಮಸೀದಿಯ ಅಡಿಯಲ್ಲಿ ಹಿಂದು ದೇವಾಲಯದ 265ಕ್ಕೂ ಹೆಚ್ಚು ಅವಶೇಷಗಳು ಸಿಕ್ಕಿವೆ. ಈ ಮಸೀದಿಯ ಅಡಿಯಲ್ಲಿ ಅಗೆದು ಅವಶೇಷಗಳನ್ನು ಹುಡುಕಿದ ತಂಡದಲ್ಲಿ ಒಟ್ಟು 52 ಮುಸ್ಲಿಮರಿದ್ದರು. ಈ ಎಲ್ಲ ದಾಖಲೆಗಳಿಂದಲೇ ಭಾರತೀಯ ಪುರಾತತ್ವ ಇಲಾಖೆ ಈ ಮಸೀದಿಯ ಅಡಿಯಲ್ಲಿ ದೇವಾಲಯವನ್ನು ನೆಲಸಮ ಮಾಡಲಾಗಿದೆ ಎಂಬ ಸತ್ಯವನ್ನು ಕಂಡುಕೊಂಡಿದೆ ಎಂದು ತಿಳಿಸಿದರು.
ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ, ಅದೇ ಜಾಗದಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ. ಮಸೀದಿಯಲ್ಲದ ಕಟ್ಟಡವನ್ನು ಮಸೀದಿ ಎಂದು ವಾದಿಸುವುದನ್ನು ಅಲ್ಲಾಹ್ ಸಹ ಒಪ್ಪುವುದಿಲ್ಲ. ಬಾಬ್ರಿ ಮಸೀದಿ ಈ ದೇಶಕ್ಕೆ ಕಪ್ಪುಚುಕ್ಕೆ. ಅದನ್ನು ಮಸೀದಿ ಎಂದು ಕರೆಯುವುದೇ ಒಂದು ದೊಡ್ಡ ಅಪರಾಧ ಎಂದವರು ಹೇಳಿದರು.