ನವದೆಹಲಿ, ಅ 04(): ಇದೀಗ ಬಹುತೇಕ ಎಲ್ಲಾ ಖಾಸಗಿ ವಾಹಿನಿಗಳಲ್ಲಿ ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುವುದರಲ್ಲಿ ಬ್ಯುಸಿಯಾಗುತ್ತಿವೆ. ಪ್ರಸ್ತುತ ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಹಾಗೂ ಪ್ರತಿ ಪಕ್ಷ ಕಾಂಗ್ರೆಸ್ ನ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ. ವಿವಿಧ ರಾಜ್ಯಗಳಿಂದ ಸಮೀಕ್ಷೆಗಳು ಆರಂಭಗೊಂಡಿದೆ. ಆದರೆ, ಸದ್ಯದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಅಲೆ ಇರುವುದನ್ನು ಸ್ಪಷ್ಟವಾಗಿಲ್ಲ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪರ ಯಾವುದೇ ಹವಾ ಇಲ್ಲ ಎಂದು ಖಾಸಗಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ.
ದೇಶದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನೋಟು ಬ್ಯಾನ್, ಜಿಎಸ್ಟಿ, ರುಪಾಯಿ ಅಪಮೌಲ್ಯ ಹೀಗೆ ಹಲವು ಬದಲಾವಣೆಗಳನ್ನು ಕೇಂದ್ರದ ಮೋದಿ ಸರಕಾರ ಜಾರಿಗೆ ತಂದಿದೆ.
ಆದರೆ, ಇದನ್ನು ಹಲವಾರು ಜನ ಸ್ವಾಗತಿಸಿದರೆ, ಹಲವು ಮಂದಿ ವಿರೋಧ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಗಳ ಪರ ಸಮೀಕ್ಷೆಯಲ್ಲಿ ಅಲೆ ಇರುವುದು ಸ್ಪಷ್ಟಗೊಂಡಿಲ್ಲ. ಆದರೆ, ಯಾವುದೇ ರಾಜ್ಯದಲ್ಲಿ ನಡೆಸಲಾಗಿರುವ ಸಮೀಕ್ಷೆಯನ್ನು ನೋಡಿದರೆ ರಾಹುಲ್ ಗಾಂಧಿ ಪರವಾದ ಅಲೆಯಂತೂ ಇಲ್ಲವೇ ಇಲ್ಲ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರೇ ದೇಶದಲ್ಲಿ ಒಂದಿಷ್ಟು ಪ್ರಭಾವಿ ವ್ಯಕ್ತಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು, ಮುಂದಿನ ಸಮೀಕ್ಷೆಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.