ಬಂಟ್ವಾಳ,ಅ 04 (MSP) : ವೆಲ್ಡಿಂಗ್ ಕೆಲಸ ಮಾಡುವ ವೇಳೆ ತಾಂತ್ರಿಕ ಕಾರಣಗಳಿಂದ ಗಂಭೀರ ಗಾಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿ ಯಾಗದೆ ಅ.03 ರ ಬುಧವಾರ ಮದ್ಯರಾತ್ರಿ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ. ಅವರು ಮೃತ ದುರ್ದೈವಿಯನ್ನು ಕಾಮಾಜೆ ನಿವಾಸಿ ಸುರೇಶ್ ಕುಲಾಲ್( 45) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಸುರೇಶ್ ಕುಲಾಲ್ ಅವರು ಮಂಗಳೂರು ಖಾಸಗಿ ವೆಲ್ಡಿಂಗ್ ಶಾಪ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಅ.29ರ ಶುಕ್ರವಾರವೂ ಎಂದಿನಂತೆ ಲಿಕೇಜ್ ಸಮಸ್ಯೆಗೆ ಸಂಬಂಧಿಸಿದಂತೆ ಪೆಟ್ರೋಲ್ ಟ್ಯಾಂಕರ್ ಒಂದರ ಮೇಲೆ ಕುಳಿತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಯಾವುದೋ ತಾಂತ್ರಿಕ ಕಾರಣಗಳಿಂದ ಪೆಟ್ರೋಲ್ ಟ್ಯಾಂಕರ್ ಸ್ಫೋಟ ಗೊಂಡು ಸುರೇಶ್ ಕುಲಾಲ್ ಜೊತೆ ನಾಲ್ವರು ಗಾಯಗೊಂಡಿದ್ದರು.ಗಂಭೀರ ಗಾಯಗೊಂಡ ಸುರೇಶ್ ಕುಲಾಲ್ ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಬುಧವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಮೃತರನ್ನು ಪತ್ನಿ ಹಾಗೂ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಸುರೇಶ್ ಕುಲಾಲ್ ನಿಧನದಿಂದ ಮನೆ ಸ್ಮಶಾನ ಮೌನವಾಗಿದೆ.