ಉಡುಪಿ, ಜೂ 07 (DaijiworldNews/MS): ವೃದ್ಧೆಯ ಕಣ್ಣಿನಿಂದ 9 ಸೆ.ಮೀ, ಉದ್ದದ ಜೀವಂತ ಹುಳವನ್ನು ಹೊರತೆಗೆಯುವಲ್ಲಿ ಪ್ರಸಾದ್ ನೇತ್ರಾಲಯ ನೇತ್ರತಜ್ಞರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಪಾರವಾದ ಕಣ್ಣು ನೋವಿನಿಂದ ಬಳಲುತ್ತಿದ್ದ 70 ವರ್ಷದ ವೃದ್ಧೆ ಬಂದಾಗ ಪ್ರಸಾದ ನೇತ್ರಾಲಯದ ವೈದ್ಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ, ಕೃಷ್ಣ ಪ್ರಸಾದ್, ತಜ್ಞ ವೈದ್ಯೆ ಡಾ. ಅಪರ್ಣಾ ನಾಯಕ್ ಮತ್ತು ಅವರ ತಂಡ ಭಾನುವಾರ ರಾತ್ರಿ ತುರ್ತು ಚಿಕಿತ್ಸೆ ನಡೆಸಿ ಈ ಹುಳದಿಂದ ವೃದ್ಧೆಗೆ ಮುಕ್ತಿ ನೀಡಿದ್ದಾರೆ.
ಏನಾಗಿತ್ತು?
ನೇತ್ರದಲ್ಲಿನ ಹುಳಬಾಧೆಯಿಂದ ಪೀಡಿತರಾಗಿದ್ದ ವೃದ್ಧೆ, ಜೂ 1 ರಂದು ಮಂಗಳವಾರ ಬೆಳಗ್ಗೆ ಪ್ರಸಾದ ನೇತ್ರಾಲಯಕ್ಕೆ ಭೇಟಿ ನೀಡಿದ್ದರು. ವಿಪರೀತ ಎಡ ಕಣ್ಣುನೋವಿನ ಬಗ್ಗೆ ವೈದ್ಯರ ಬಳಿ ಸಮಾಲೋಚಿಸಿದ್ದರು, ತುರ್ತಾಗಿ ಪರೀಕ್ಷಿಸಿದ ಕೃಷ್ಣಾಪ್ರಸಾದ್ ಜೀವಂತ ಹುಳು ಅಕ್ಷಿಪಟಲದ ಸುತ್ತು ತಿರುಗುತ್ತಲೇ ಇರುವುದನ್ನು ಗಮನಿಸಿ ತುರ್ತು ಚಿಕಿತ್ಸೆಗೆ ಸಿದ್ಧರಾದರು. ತಡಮಾಡಿದರೆ ಈ ಹುಳು ಮೆದುಳು ಪ್ರವೇಶಿಸಿದರೆ ಮತ್ತಷ್ಟು ಅಪಾಯವೆಂದು ಅರಿತ ಡಾ. ಕೃಷ್ಣಪ್ರನಾದ್ ಮತ್ತು ಅವರ ಸಹ ವೈದ್ಯರಾದ ಡಾ. ಅಪರ್ಣಾ ನಾಯಕ್ ಇವರನ್ನೊಳಗೊಂಡ ತಂಡ ನೇತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಿತು, ಹುಳವನ್ನುತಕ್ಷಣ ನಿಷ್ಕ್ರಿಯಗೊಳಿಸಲು ಔಷಧಿಯನ್ನು ನೀಡಲಾಯಿತು. ಇದರ ಪರಿಣಾಮವೋ ಏನೋ ಎಡಗಣ್ಣಿನಲ್ಲಿದ್ದ ಹುಳು ಕಾಣದಾಯಿತು. ಕಣ್ಣು ನೋವು ಮಾಯವಾಯಿತು. ಅಲ್ಲದೇ ಹುಳ ಸತ್ತಿರಬಹುದು ಎಂದು ಅಂದಾಜಿಸಲಾಯಿತು. ಇದರಿಂದ ತುಸು ನೆಮ್ಮದಿ ಪಡೆದ ವೃದ್ಧೆ ಮನೆಗೆ ತೆರಳಿದರು ಮತ್ತು 3 ದಿನಗಳ ಬಳಿಕ ಕಣ್ಣಿನಲ್ಲಿ ಯಾವುದೇ ತೊಂದರೆಯು ಇಲ್ಲ ಎಂದು ತಿಳಿಸಿದ್ದರು.
ಆದರೆ ಭಾನುವಾರ ಸಾಯಂಕಾಲ ಇವರಿಗೆ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ಮನೆಯವರಿಗೆ ಹುಳವೂ ಹರಿದುಬರುವುದನ್ನು ನೋಡಿದರು.ಇದರಿಂದ ಭಯಭೀತರಾದ ಕುಟುಂಬದವರು ಪ್ರಸಾದ ನೇತ್ರಾಲಯಕ್ಕೆ ಮತ್ತೆ ಆಗಮಿಸಿದರು. ಕರೆಗೆ ತುರ್ತಾಗಿ ಸ್ಪಂಧಿಸಿದ ಡಾ. ಕೃಷ್ಣಪ್ರಸಾದ್ ತಂಡ ತಡಮಾಡದೆ, ಈ ಬಾರಿ ಆಪರೇಶನ್ ಕೊಠಡಿಗೆ ಹೋಗದೆ, ಹೊರರೋಗಿ ವಿಭಾಗದಲ್ಲಿಯೇ ತುರ್ತು ಚಿಕಿತ್ಸೆ ಮಾಡಿಯೇ ಬಿಟ್ಟರು. ಆಶ್ಚರ್ಯವೆಂಬಂತೆ ಸುಮಾರು 9 . ಮೀ. ಉದ್ದದ ಜೀವಂತ ಹುಳು ಹೊರಬಂತು
" 26 ವರ್ಷಗಳ ಅನುಭವದಲ್ಲಿ ಒಮ್ಮೆ ರೆಟಿನಾ ಹಿಂದಿನಿಂದ ಹಾಗೂ ಕಣ್ಣಿನ ಕುಣಿಕೆಯಿಂದ ಹದಿನೈದು ವರ್ಷಗಳ ಹಿಂದೆ ವಿಭಿನ್ನ ರೀತಿಯ ಹುಳವನ್ನು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದ್ದಿದ್ದವು. ಆದರೆ ಭಾನುವಾರ ಹೊರತೆಗೆದ ಹುಳು ನೇತ್ರದ ಹೊರಪದರದಿಂದ ಹೊರತೆಗೆದ ಪ್ರಥಮ ಹುಳುವಾಗಿದೆ ಈ ಹುಳದ ಕುರಿತಾಗಿ ಮತ್ತಷ್ಟು ಅಧ್ಯಯನ ನಡೆಸಲು ಪ್ರಾಯೋಗಾಲಯಕ್ಕೆ ಕಳುಹಿಸಲಾಗಿದೆ, ಅಲ್ಲಿಂದ ಮಾಹಿತಿ ಬರಬೇಕಾಗಿದೆ" ಎಂದು ಡಾ. ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.