ನವದೆಹಲಿ, ಅ 04 (MSP): ಭಾರತ ಮತ್ತು ರಷ್ಯಾ ನಡುವೆ ಮೆಗಾ ಡೀಲ್ ನಡೆಸಲು ಉಭಯ ರಾಷ್ಟ್ರಗಳು ಮುಂದಾಗಿದ್ದು ಈ ಹಿನ್ನಲೆಯಲ್ಲಿ ಅ.5 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ರಷ್ಯಾದಿಂದ ರೂ.36 ಸಾವಿರ ಕೋಟಿ ವೆಚ್ಚದಲ್ಲಿ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಸಲುವಾಗಿ ಭಾರತ ಮತ್ತು ರಷ್ಯಾ ಸಹಿ ಹಾಕಲಿದೆ.
ಈ ಒಪ್ಪಂದದಿಂದ ಭಾರತದ ಮೇಲೆ ಕೆಂಡಾಮಂಡಲವಾಗಿರುವ ಅಮೇರಿಕಾ ತಕ್ಷಣ ಈ ವಹಿವಾಟು ನಿಲ್ಲಿಸುವಂತೆ ಬೆದರಿಸುತ್ತಿದೆ. ಒಂದು ವೇಳೆ ಈ ವಹಿವಾಟು ನಿಲ್ಲಿಸಲಿದ್ದರೆ ನಿರ್ಬಂಧ ಎದುರಿಸಿಬೇಕಾಗುತ್ತದೆ ಎಂದು ಗುರುವಾರ ಖಡಕ್ ಎಚ್ಚರಿಕೆ ರವಾನಿಸಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಭಾರತಕ್ಕೆ ಭೇಟಿ ಹಾಗೂ ಭಾರತ-ರಷ್ಯಾ ನಡುವೆ ನಡೆಯುತ್ತಿರುವ ಬೃಹತ್ ಡೀಲ್ ಸಂಬಂಧಪಟ್ಟಂತೆ, ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ವಕ್ತಾರ, ರಷ್ಯಾದ ಜತೆ ಮಾಡುತ್ತಿರುವ ವ್ಯವಹಾರ ಹಾಗೂ ಒಪ್ಪಂದಗಳನ್ನು ಕೈಬಿಡಬೇಕು ಎಂದು ನಮ್ಮ ಮಿತ್ರ ಮತ್ತು ಪಾಲುದಾರ ದೇಶಗಳನ್ನು ಒತ್ತಾಯಿಸುತ್ತಿದೆ ಎಂದಿದ್ದಾರೆ. ರಷ್ಯಾದಿಂದ ಸಮರ ಸಾಮಾಗ್ರಿಗಳನ್ನು ಚೀನಾ ಖರೀದಿಸಿತ್ತು ಎಂದು ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕಾ ದಿಗ್ಬಂಧನ ವಿಧಿಸಿತ್ತು.