ಉಡುಪಿ, ಜೂ.06 (DaijiworldNews/HR): ಮಂಗಳೂರು ಮೂಲದ ಉದ್ಯಮಿಗೆ ಸೇರಿದ್ದ ಇಂಡಸ್ಟ್ರಿಯಲ್ ಸೈಟ್ನಲ್ಲಿ ನಡೆಯುತಿದ್ದ ಕೆಲಸದ ವೇಳೆ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತಪಟ್ಟ ಘಟನೆ ಉಡುಪಿಯ ನಂದಿಕೂರಿನಲ್ಲಿ ನಡೆದಿದೆ.
ಮೃತ ಟಿಪ್ಪರ್ ಚಾಲಕನನ್ನು ಮಂಗಳೂರು ಮೂಲದ ಹರೀಶ್ ಕುಮಾರ್ ಎಂದು ಗುರುತಿಸಲಗಿದೆ.
ಟಿಪ್ಪರ್ನಿಂದ ಮಣ್ಣು ಅನ್ಲೋಡ್ ಮಾಡುವ ವೇಳೆ ಈ ಘಟನೆ ನಡೆದಿದೆ.
ಟಿಪ್ಪರ್ನಿಂದ ಮಣ್ಣು ಅನ್ಲೋಡ್ ಆಗದೇ ಇರುವುದನ್ನು ಗಮನಿಸಿ ಪರೀಕ್ಷಿಸಿಲು ಡ್ರೈವರ್ ಸೀಟ್ ನಿಂದ ಕೆಳಗಿಳಿದ ವೇಳೆ ನಿಯಂತ್ರಣ ತಪ್ಪಿದ ಟಿಪ್ಪರ್ ಚಾಲಕನ ಮೇಲೆ ಬಿದ್ದಿದೆ.
ಮೃತ ಹರೀಶ್ ಕುಮಾರ್ ಈ ಮೊದಲು ಮಂಗಳೂರಿನ ಖಾಸಗಿ ಬಸ್ ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಲಾಕ್ಡೌನ್ ಕಾರಣದಿಂದಾಗಿ ಇತ್ತೀಚಿಗೆ ಟಿಪ್ಪರ್ನಲ್ಲಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.