ಮಂಗಳೂರು, ಜೂ. 04 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರದಂದು 806 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 9 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಉಡುಪಿ ಜಿಲ್ಲೆಯಲ್ಲಿ 561 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ಸೋಂಕಿನ ವಿವರ:
ಜಿಲ್ಲೆಯಲ್ಲಿ ಶುಕ್ರವಾರ ಕೊರೋನಾ ಸೋಂಕಿಗೆ 9 ಮಂದಿ ಬಲಿ
ಹೊಸದಾಗಿ 806 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಶುಕ್ರವಾರ 858 ಮಂದಿ ಕೊರೋನಾದಿಂದ ಗುಣಮುಖ
7,906-ಜಿಲ್ಲೆಯಲ್ಲಿ ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಕೊರೋನಾಗೆ ಜಿಲ್ಲೆಯಲ್ಲಿ ಒಟ್ಟು ಬಲಿಯಾದವರು 937ಕ್ಕೆ ಏರಿಕೆ
ಉಡುಪಿಯ ಇಂದಿನ ಕೊರೋನಾ ವರದಿ:
ಉಡುಪಿಯಲ್ಲಿ ಶುಕ್ರವಾರ 561 ಮಂದಿಯಲ್ಲಿ ಪಾಸಿಟಿವ್
585 ಮಂದಿ ಶುಕ್ರವಾರದಂದು ಗುಣಮುಖ
ಮತ್ತೆ ಮೂವರು ಸೋಂಕಿಗೆ ಬಲಿ
4540-ಮಂದಿ ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು