ಮಂಗಳೂರು, ಅ 03 (MSP): ಸರ್ಕಾರದಿಂದ ದೊರೆಯುವ ಬಯೋ ಗ್ಯಾಸ್ ಸಬ್ಸಿಡಿಗೆ, ಎಜೆನ್ಸಿ ಮಾಲೀಕರೊಬ್ಬರಿಂದ ಮಂಗಳೂರು ಜಿ. ಪಂ ಕಚೇರಿಯಲ್ಲಿರುವ ಸಮಗ್ರ ಗ್ರಾಮೀಣ ಇಂಧನ ಯೋಜನೆಯ ಪ್ರಾಜೆಕ್ಟ್ ಅಧಿಕಾರಿ ಎನ್. ನಾಗೇಶ್ ಲಂಚ ಪಡೆಯುತ್ತಿದ್ದ ವೇಳೆ ಸೆ 03 ರ ಬುಧವಾರ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಬ್ಸಿಡಿ ಹಣ ಬಿಡುಗಡೆ ಮಾಡಲು ಲಂಚಕ್ಕಾಗಿ ಪೀಡಿಸುತ್ತಿದ್ದ ಅಧಿಕಾರಿಗೆ ಎಜೆನ್ಸಿ ಮಾಲಕರು ಈ ಹಿಂದೆ 15,000 ನೀಡಿದ್ದರು. ಅದರೆ ಮತ್ತೆ 35,000 ನೀಡದಿದ್ದರೆ ಸಬ್ಸಿಡಿ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಲಂಚ ನೀಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ನೊಂದಿದ್ದ ಎಜೆನ್ಸಿ ಮಾಲಕರು ನೇರವಾಗಿ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕಚೇರಿಗೆ ಹೋಗಿ ದೂರು ನೀಡಿ ಸಲ್ಲಿಸಿದ್ದರು.
ಎಜೆನ್ಸಿ ಮಾಲಕರಿಂದ ಬುಧವಾರ 30,000 ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಶೃತಿ.ಎನ್.ಎಸ್, ಡಿವೈಎಸ್ಪಿ ಸುಧೀರ್.ಎಮ್.ಹೆಗ್ಡೆ, ಇನ್ಸ್ಪೆಕ್ಟರ್ ಯೊಗೀಶ್ ಕುಮಾರ್ ಮತ್ತು ಸಿಬ್ಬಂದಿಗಳಾದ ಹರಿಪ್ರಸಾದ್, ಉಮೇಶ್, ರಾಧಕೃಷ್ಣ. ಕೆ , ರಾಧಕೃಷ್ಣ, ಪ್ರಶಾಂತ್, ವೈಶಾಲಿ, ರಾಕೇಶ್ ವಾಗ್ಮನ್,ಗಣೇಶ್, ರಾಜೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.