ಕಾಸರಗೋಡು, ಜೂ.03 (DaijiworldNews/HR): ಕಾಞ೦ಗಾಡ್ ನಗರಸಭಾ ಸದಸ್ಯ ಬಿನೀಶ್ ರಾಜ್(42) ಅವರಿಗೆ ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಅರವರನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ನಗರಸಭೆಯ 30ನೇ ವಾರ್ಡ್ನ ಕಾಂಗ್ರೆಸ್ ಸದಸ್ಯರಾಗಿದ್ದರು. ದುಬಾಯಿಯ ಇನ್ ಕಾಸ್, ನಾಸ್ಕ್ ಯುಎಇ ಸಮಿತಿ ಸದಸ್ಯರಾಗಿದ್ದ ಬಿನೀಶ್ ರಾಜ್ ಗಲ್ಫ್ ಉದ್ಯೋಗ ಬಿಟ್ಟು ಕಳೆದ ಜೂನ್ನಲ್ಲಿ ಊರಿಗೆ ಆಗಮಿಸಿದ್ದರು.
ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.