ಕಾಸರಗೋಡು, ಜೂ. 02 (DaijiworldNews/SM): ಜಿಲ್ಲೆಯಲ್ಲಿ ಬುಧವಾರವೂ ಕೂಡ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಬುಧವಾರ 461 ಮಂದಿಗೆ ಸೋಂಕು ದೃಢಪಟ್ಟಿದೆ.
ಬುಧವಾರದಂದು 647 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 5815 ಮಂದಿ ಚಿಕಿತ್ಸೆಯಲ್ಲಿದ್ದಾರೆ. 25,376 ಮಂದಿ ನಿಗಾದಲ್ಲಿದ್ದಾರೆ. ಬುಧವಾರ 2,690 ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ.
ಇದುವರೆಗೆ 72, 594 ಮಂದಿಗೆ ಸೋಂಕು ದೃಢಪಟ್ಟಿದ್ದು, 66,234 ಮಂದಿ ನಿಗಾದಲ್ಲಿದ್ದಾರೆ.