ಉಡುಪಿ, ಜೂ 02 (DaijiworldNews/MS): ಜಿಲ್ಲೆಯಲ್ಲಿ ಇಂದಿನಿಂದ ಜೂ.7 ರವರೆಗೆ 5 ದಿನಗಳ ಕಾಲ 35 ಗ್ರಾಮಗಳು ಸಂಪೂರ್ಣ ಲಾಕ್ ಡೌನ್ ಆಗಿರಲಿದ್ದು ಅಗತ್ಯ ವಸ್ತುಗಳ ಅಂಗಡಿ ತೆರೆಯಲೂ ಅವಕಾಶವಿಲ್ಲ. ಗ್ರಾಮಗಳ ಲಾಕ್ ಡೌನ್ ಯಶಸ್ವಿಗೊಳಿಸಲು ಗ್ರಾಮಗಳ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು,ಗ್ರಾಮದಿಂದ ಯಾರಿಗೂ ಹೊರ ಹೋಗುವಂತಿಲ್ಲ ಎಂದು ಗ್ರಾಮಸ್ಥರಿಗೆ ಪೋಲಿಸರು ತಿಳಿಹೇಳುತ್ತಿದ್ದಾರೆ.
50ಕ್ಕೂ ಅಧಿಕ ಕೊವೀಡ್ ಪ್ರಕರಣಗಲಿರುವ ಗ್ರಾಮಗಳಲ್ಲಿ ಕಠಿಣ ಲಾಕ್ ಡೌನ್ ಗೆ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಸೂಚಿಸಿರುವ ಹಿನ್ನಲೆಯಲ್ಲಿ 35 ಗ್ರಾಮಗಳ ಗಡಿಯಲ್ಲಿ ಪೋಲಿಸ್ ಬಂದೊಬಸ್ತ್ ಏರ್ಪಡಿಸಲಾಗಿದ್ದು, ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ಅಗತ್ಯವಿದ್ದರೆ ಮಾತ್ರ ಬಿಡುತ್ತಿದ್ದಾರೆ. ಇನ್ನು ಈಗಾಗಲೇಗ್ರಾಮಗಳಿಗೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದ್ದುಗ್ರಾಮ ಲಾಕ್ ಡೌನ್ ಗೆ ಗ್ರಾಮ ಪಂಚಾಯತಿ ಸದಸ್ಯರ ಸಾಥ್ ನೀಡಿದ್ದಾರೆ
ಪೊಲೀಸ್ ಬಂದೋಬಸ್ತ್ ಇರದ ಚೆಕ್ ಪೋಸ್ಟ್ ಗಳಲ್ಲಿ ಪಂಚಾಯತಿ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜೂನ್ 7 ರ ಒಳಗೆ ಪಾಸಿಟಿವಿಟಿ ಪ್ರಮಾಣ 10% ಕ್ಕೆ ತರಲು ಜಿಲ್ಲಾಡಳಿತ ಪ್ಲ್ಯಾನ್ ಮಾಡಿದ್ದು, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಪೆಟ್ರೋಲ್ ಪಂಪ್ ಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ, ಕೆಎಂಎಫ್ ಹಾಲಿನ ಬೂತ್ , ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು . ಮೆಡಿಕಲ್ ಸೇರದಂತೆ ಎಲ್ಲಾ ರೀತಿಯ ಅರೋಗ್ಯ ಕ್ಷೇತ್ರದ ಸಂಬಂದಿತ ಚಟುವಟಿಕೆಗಳಿಗೆ ಹಾಗೂ ಈಗಾಗಲೇ ಅನುಮತಿ ಪಡೆದ ವಿವಾಹ ಸಮಾರಂಭಕ್ಕೆ ಹೊರತುಪಡಿಸಿ ಉಳಿದೆಲ್ಲಾವುಗಳಿಗೆ ಅನುಮತಿ ನಿರಾಕರಿಸಲಾಗಿದೆ.