ಮಂಗಳೂರು, ಜೂ 02 (DaijiworldNews/MS): ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಂಗಳವಾರ ಐದು ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ 39 ಪ್ರಕರಣಗಳು ಕಾಣಿಸಿಕೊಂಡಿದೆ. ಇದರಲ್ಲಿ 8 ದ.ಕ ಜಿಲ್ಲೆಗೆ ಮತ್ತು 31 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ಮಂಗಳವಾರ ಸೋಂಕು ದೃಢಪಟ್ಟವರಲ್ಲಿ ಹಾವೇರಿ, ಶಿವಮೊಗ್ಗ , ಉಡುಪಿ, ಚಿಕ್ಕಮಗಳೂರು, ಮತ್ತು ಉತ್ತರ ಕನ್ನಡ ಜಿಲ್ಲೆಗಳ ತಲಾ ಓರ್ವರು ಇದ್ದಾರೆ. ಮೃತಪಟ್ಟ್ವರು ಉತ್ತರ ಕನ್ನಡದವರಾಗಿದ್ದಾರೆ.
ಈಗಾಗಲೇ ದ.ಕ. ಜಿಲ್ಲೆಯ ಇಬ್ಬರು ಹಾಗೂ ಹೊರಜಿಲ್ಲೆಯ ಐವರು ಬ್ಲ್ಯಾಕ್ ಫಂಗಸ್ನಿಂದ ಮೃತಪಟ್ಟಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.