ಪುತ್ತೂರು, ಜೂ.01 (DaijiworldNews/HR): ಪುತ್ತೂರು ತಾಲೂಕಿನ ಈಶ್ವರಮಂಗಳದಲ್ಲಿರುವ ಮೆಡಿಕಲ್ನ ಒಳಗೆ ನುಗ್ಗಿ ಭಿನ್ನ ಕೋಮಿನ ಯುವಕನೋರ್ವ ಮಹಿಳಾ ಸಿಬ್ಬಂದಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
ಸಾಂಧರ್ಭಿಕ ಚಿತ್ರ
ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್ಗೆ ಔಷಧಿ ಖರೀದಿಸಲು ಬಂದ ಯುವಕ ಮೆಡಿಕಲ್ನಲ್ಲಿ ಯುವತಿಯೋರ್ವಳೆ ಇರುವುದನ್ನು ಕಂಡು ನೇರವಾಗಿ ಒಳನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಯುವತಿ ಬೊಬ್ಬೆ ಹೊಡೆದಾಗ ಸುತ್ತ ಮುತ್ತಲ ಜನರು ಜಮಾಯಿಸಿ, ಆರೋಪಿ ಯುವಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ಹೆಚ್ಚಿನ ವಿವರ ಲಭ್ಯವಾಗಬೇಕಿದೆ.