ಮಂಗಳೂರು, ಜೂ.01 (DaijiworldNews/HR): ಸಿಮ್ ವೆರಿಫಿಕೇಶನ್ ನೆಪ ಹೇಳಿಕೊಂಡು ಲಿಂಕ್ ಕಳುಹಿಸಿ ದಾಖಲೆಗಳನ್ನು ಪಡೆದು ಆ ಬಳಿಕ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿರುವ ಕುರಿತು ಮಂಗಳೂರಿನ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ಸಾಂಧರ್ಭಿಕ ಚಿತ್ರ
ವ್ಯಕ್ತಿಯೋರ್ವರಿಗೆ ಮೇ.28 ರಂದು ಅಪರಿಚಿತನೊಬ್ಬ ಸಂದೇಶ ಕಳುಹಿಸಿ ನಿಮ್ಮ ಏರೆಟೆಲ್ ಸಿಮ್ ವೆರಿಫಿಕೇಷನ್ ಬಗ್ಗೆ ದಾಖಲಾತಿ ಪರಿಸೀಲನೆ ಬಾಕಿ ಇದ್ದು ದಾಖಲಾತಿಗಳನ್ನು ಸಲ್ಲಿಸದಿದ್ದರೆ ಸೇವೆ ಸ್ಥಗಿತಗೊಳ್ಳುತ್ತದೆ ಹಾಗಾಗಿ ಈ ಬಗ್ಗೆ ವಿಚಾರಿಸಲು 8388804277 ಈ ನಂಬರ್ ಗೆ ಕರೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇದನ್ನು ನಂಬಿದ ವ್ಯಕ್ತಿಯು ಆ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿಯು ದಾಖಲಾತಿ ಅರಿಶೀಲನೆ ಬಗ್ಗೆ ಲಿಂಕ್ ಒಂದನ್ನು ಕಳುಹಿಸಿಕೊಟ್ಟು ಆ ಲಿಂಕ್ ಮೂಲಕ ಒಂದು ಆಪ್ ಅನ್ನು ಕಳುಹಿಸಿ ಅದನ್ನು ಡೌನ್ಲಾಡ್ ಮಾಡಿ ಅದರ ಮೂಖಾಂತರ ರಿಚಾರ್ಜ್ ಮಾಡುವಂತೆ ತಿಳಿದ್ದು, ವ್ಯಕ್ತಿಯು ಆಪ್ ಡೌನ್ಲಾಡ್ ಮಾಡಿ ಬ್ಯಾಂಕ್ ಖಾತೆ ವಿವರಗಳನ್ನು ದಾಖಲಿಸಿ ಮೊಬೈಲ್ ರಿಚಾರ್ಜ್ ಮಾಡುತ್ತಾರೆ.
ಆ ಬಳಿಕ ಅಪರಿಚಿತ ವ್ಯಕ್ತಿಯು 74,989 ರೂ. ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.