ಚೆನ್ನೈ, ಅ 2(SM): ಎಸಿ ಇಲ್ಲದೆ ಜೀವನೆ ನಿರ್ವಹಣೆ ಅಸಾಧ್ಯ. ದಿನ ಕಳೆಯಲು ಸಾಧ್ಯವೇ ಇಲ್ಲ ಅನ್ನುವರಿಗೆ ಶಾಕಿಂಗ್ ಸುದ್ದಿಯೊಂದಿದೆ. ಏರ್ ಕಂಡೀಷನರ್ ನಿಂದ ಹೊರಬಂದ ವಿಷಾನಿಲ ಒಂದೇ ಕುಟುಂಬದ ಮೂವರನ್ನು ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಚೆನ್ನೈನ ಕೊಯಂಬೀಡುವಿನ ತಿರುವಳ್ಳುವರ್ ನಗರದಲ್ಲಿ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೂವತ್ತೈದು ವ್ಯಕ್ತಿ, ಅವರ ಪತ್ನಿ ಹಾಗೂ ಮಗ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮುಂಜಾನೆಯಾದರೂ, ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಬಾರದಿದ್ದಾಗ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ವಾಯವ್ಯ ದೆಹಲಿಯ ಆದರ್ಶ್ ನಗರ ಪ್ರದೇಶದಲ್ಲಿ ಏರ್ ಕಂಡೀಷನರ್ ಸ್ಫೋಟವಾಗಿ ಹತ್ತು ವರ್ಷದ ಬಾಲಕ ಹಾಗೂ ಆತನ ಸೋದರಿ ಮೃತಪಟ್ಟಿದ್ದರು. ಆ ಘಟನೆ ಸಂಭವಿಸಿದಾಗ ಅಜ್ಜಿಯೊಂದಿಗೆ ಈ ಮಕ್ಕಳು ಮನೆಯಲ್ಲಿದ್ದರು. ಪೋಷಕರು ಹೊರಗೆ ಹೋಗಿದ್ದರು. ಆ ಘಟನೆ ಸಂಭವಿಸಿದಾಗ ಅಜ್ಜಿ ಬದುಕಿಕೊಂಡಿದ್ದರು. ಆದರೆ ಬೆಂಕಿ ಅವಘಡದಲ್ಲಿ ಸಿಲುಕಿ ಮಕ್ಕಳು ಸಾವನ್ನಪ್ಪಿದ್ದರು.