ಕಾಸರಗೋಡು, ಮೇ 30 (DaijiworldNews/SM): ತಿಂಗಳ ಬಳಿಕ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ ಭಾರೀ ಇಳಿಕೆಯಾಗಿದೆ. ಸೋಮವಾರದಂದು ಸೋಂಕಿತರ ಸಂಖ್ಯೆ ಐನೂರಕ್ಕಿಂತ ಕಡಿಮೆಯಾಗಿದೆ.
ಒಂದೂವರೆ ತಿಂಗಳ ಬಳಿಕ ಸೋಂಕಿತರ ಸಂಖ್ಯೆ 500ಕ್ಕಿಂತ ಕಡಿಮೆಯಾಗಿದೆ. ಸೋಮವಾರ 341 ಮಂದಿಗೆ ಸೋಂಕು ದ್ರಢಪಟ್ಟಿದ್ದು, 678 ಮಂದಿ ಗುಣಮುಖರಾಗಿದ್ದಾರೆ.
ಸೋಮವಾರದಂದು ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 33,924 ಮಂದಿ ನಿಗಾದಲ್ಲಿದ್ದಾರೆ. ಸೋಮವಾರ 2,470 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಇದುವರೆಗೆ 71,694 ಮಂದಿಗೆ ಸೋಂಕು ದ್ರಢಪಟ್ಟಿದ್ದು, 64,792 ಮಂದಿ ಗುಣಮುಖರಾಗಿದ್ದಾರೆ.