ಬೆಳ್ತಂಗಡಿ, ಮೇ.30 (DaijiworldNews/HR): ಪಟ್ರಮೆ ಗ್ರಾಮದ ಕೊಡಂದೂರು ಎಂಬಲ್ಲಿ ಪಂಪುಶೆಡ್ನೊಳಗೆ ಸ್ವಿಚ್ ಹಾಕುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ತಾಯಿ ಹಾಗೂ ಪುಟ್ಟ ಮಗ ಸ್ಥಳ ದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಮೃತಪಟ್ಟವರನ್ನು ಕೊಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ ಗೀತಾ (30) ಹಾಗೂ ಪುತ್ರ ಭವಿಷ್ (4) ಎಂದು ಗುರುತಿಸಲಾಗಿದೆ.
ದನಗಳಿಗೆ ನೀರು ಕೊಡಲೆಂದು ಪಂಪುಶೆಡ್ಗೆ ಹೋಗಿ ಸ್ವಿಚ್ ಹಾಕುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.