ಕಾಸರಗೋಡು, ಮೇ.28 (DaijiworldNews/HR): ಜಿಲ್ಲೆಯಲ್ಲಿ ಶುಕ್ರವಾರ 534 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 580 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದು, 7,177 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದು, 30,685 ಮಂದಿ ನಿಗಾದಲ್ಲಿದ್ದಾರೆ .
ಇನ್ನು ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 70 ಸಾವಿರ ದಾಟಿದ್ದು, 70,315 ಮಂದಿಗೆ ಸೋಂಕು ಪತ್ತೆಯಾಗಿದ್ದು, 62, 634 ಮಂದಿ ಗುಣಮುಖರಾಗಿದ್ದಾರೆ.