ಬೆಳ್ತಂಗಡಿ, ಅ 2(SM): ಮಹಿಳೆಯೊಂದಿಗಿನ ಅಕ್ರಮ ಸಂಬಂಧದಿಂದ ಹುಟ್ಟಿದ ಶಿಶುವಿನ ಹತ್ಯೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಧರ್ಮಸ್ಥಳ ಠಾಣಾ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಪಟ್ರಮೆಯ ಶಿವಪ್ಪ(45) ಎಂದು ಗುರುತಿಸಲಾಗಿದೆ.
ಪಟ್ರಮೆ ಗ್ರಾಮ ನಿವಾಸಿ ಸಂಜೀವ ಎಂಬವರ ಸಹೋದರಿ ಅಕ್ರಮ ಸಂಬಂಧದಿಂದಾಗಿ ಶಿಶುವಿಗೆ ಜನ್ಮ ನೀಡಿದ್ದಾರೆ. ಬಳಿಕ ಗ್ರಾ.ಪಂ.ನಿಂದ ಮಂಜೂರಾಗಿದ್ದ ಮನೆಗೆ ಆಕೆ ಶಿಶು ಹಾಗೂ ಪ್ರಿಯಕರ ಶಿವಪ್ಪನೊಂದಿಗೆ ತೆರಳಿದ್ದಾಳೆ. ಆದರೆ ಸೆ. 24 ರಂದು ಪುಷ್ಪಾಳ ಮೊದಲನೇ ಮಗಳು ಅಮಿತಾಕ್ಷಿ ತನ್ನ ಮನೆಗೆ ಬಂದಾಗ ತಾಯಿ ಹಾಗೂ ಶಿವಪ್ಪ ಸೇರಿಕೊಂಡು ಮಗುವನ್ನು ಮಣ್ಣಿನೊಳಗೆ ಹಾಕಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ಸಂಜೀವ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಅದರಂತೆ ಧರ್ಮಸ್ಥಳ ಪೋಲಿಸರು ಹಾಗೂ ತಹಸೀಲ್ದಾರ್ ಸ್ಥಳಕ್ಕೆ ತೆರಳಿ ಪರಿಶಿಲನೆ ನಡೆಸಿ ಶಿಶುವಿನ ಶವ ತೆಗೆದಿದ್ದಾರೆ. ಆರೋಪಿ ಶಿವಪ್ಪ ಅವರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ತಾಯಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.