ಕುಂದಾಪುರ, ಸೆ 10(SM): ಈ ಸ್ಟೋರಿ ಕೇಳೊಕೆ ಒಂಥರಾ ತ್ರಿಲ್ಲಿಂಗ್ ಆಗಿದ್ರೂ ಕೂಡ ಸತ್ಯ ಘಟನೆ. ಕುಂದಾಪುರ ತಾಲೂಕಿನ ಸುಮಾರು 60 ವಷ೯ದ ವ್ಯಕ್ತಿಯೊಬ್ಬರ ಕಣ್ಣಿನಲ್ಲಿ ಜೀವಂತ ಹುಳು ಪತ್ತೆಯಾಗಿದೆ. ಹಿರಿಯ ನಾಗರಿಕರೊಬ್ಬರು ಕಳೆದ ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ದರು.
ಹಿರಿಯ ನಾಗರಿಕರ ನೋವು ಅರಿತ ಕುಂದಾಪುರದ ಮೆಡಿಕಲ್ ಸೆಂಟರಿನ ನೇತ್ರ ತಜ್ಞರಾದ ಡಾ.ಶ್ರೀಕಾಂತ್ ಶೆಟ್ಟಿಯವರಿಗೆ ಅವರಿಗೆ ನೆರವಾಗಿದ್ದಾರೆ. ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಬಲಗಣ್ಣಿನ ಒಳಗೆ ಜೀವಂತ ಹರಿದಾಡುತ್ತಿರುವ ಹುಳವನ್ನು ಪತ್ತೆಹಚ್ಚಿದ್ದಾರೆ. ಕಣ್ಣಿನ ಒಳಗಿರುವ ಹುಳವನ್ನು ಔಷಧದ ಮೂಲಕ ಸಾಯಿಸಿ ತೆಗೆದರೆ ಕಣ್ಣಿಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಆ ಹುಳವನ್ನು ಒಂದು ಕಡೆ ಬರುವಂತೆ ಮಾಡಿ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜೀವಂತ ಹುಳವನ್ನು ತೆಗೆದಿದ್ದಾರೆ. ಹುಳ ತೆಗೆದ ನಂತರ ರೋಗಿಯು ಸಂಪೂಣ೯ವಾಗಿ ಚೇತರಿಸಿಕೊಂಡಿದ್ದಾರೆ. ಸುಮಾರು 15 ಸೆ.ಮೀಟರ್ ಉದ್ದದ ಹುಳು ಕಣ್ಣಿನಲ್ಲಿ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಈ ಹುಳವನ್ನು ವುಚೆರಿಯಾ ಬ್ಯಾನ್ಕ್ರಾಫ್ಟಿ ಎನ್ನುವ ಜಾತಿಯದಾಗಿದ್ದು ಇದು ಸೊಳ್ಳೆಗಳ ಮೂಲಕ ಹರಡುತ್ತದೆ. ಸೊಳ್ಳೆಗಳು ಕಚ್ಚಿದಾಗ ಇದರ ಲಾವಾಗಳು ರಕ್ತದಲ್ಲಿ ಸೇರಿ ಅಲ್ಲೇ ಬೆಳೆದು ಮೊಟ್ಟೆಯನ್ನಿಡುತ್ತವೆ. ಅಪರೂಪಕ್ಕೆ ಈ ಮೊಟ್ಟೆಗಳು ಕಣ್ಣಿನಲ್ಲಿ ಸೇರಿ ಅಲ್ಲೇ ಬೆಳೆದು ಹುಳುವಾಗಿ ಪರಿವತ೯ನೆಯಾಗುವ ಸಾಧ್ಯತೆಗಳಿವೆ.