ಮಂಗಳೂರು, ಮೇ 28(DaijiworldNews/MS): ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿ, ಮೆಹಂದಿ ಕಾರ್ಯಕ್ರಮ ಹಾಗೂ ಡಿಜೆ ಪಾರ್ಟಿ ನಡೆಸಿದ ವಿರುದ್ದ ಕೊಣಾಜೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
"ಮೇ.20 ರಂದು ಶೋಭಾ ಕೌಶಲ್ ಎಂಬವರು ಮದುವೆ ಬಗ್ಗೆ ಪಾವೂರು ಪಂಚಾಯತಿಯಿಂದ ಷರತ್ತು ಭದ್ದ ಅನುಮತಿ ಪಡೆದಿರುತ್ತಾರೆ. ಆದರೆ ಮೇ 19 ರಂದು ರಾತ್ರಿ ಮೆಹಂದಿ ಕಾರ್ಯಕ್ರಮದ ಅನುಮತಿ ಇಲ್ಲದಿದ್ದರೂ ದ್ವನಿವರ್ಧಕ ಬಳಸಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೆ ನೃತ್ಯ ಮಾಡಿರುತ್ತಾರೆ. ಈ ರೀತಿಯಾಗಿ ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಪಾವೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾರಣಿ ಅವರು ದೂರು ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಕೊಣಾಜೆ ಠಾಣಾ ಪೊಲೀಸರು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.