ಮಂಗಳೂರು, ಮೇ.27 (DaijiworldNews/HR): ಪಂಪ್ವೆಲ್ ಪ್ಲೈಓವರ್ನಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಗುರುವಾರ ಬೆಳ್ಳಗ್ಗೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದ ಸವಾರ ಗಾಯಗೊಂಡ ಘಟನೆ ನಡೆದಿದೆ.
ಗೋರಿಗುಡ್ಡೆ ಕಡೆಯಿದಯಿಂದ ನೂತನ ರಿಜಿಸ್ಟರ್ಡ್ ಕಾರು ಅತೀ ವೇಗದಿಂದ ಬರುತ್ತಿದ್ದು, ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಕಾರು ರಸ್ತೆ ವಿಭಾಜಕದ ಮೇಲೆ ಸಾಗಿ ಸುಮಾರು ಮೀಟರ್ ಮುಂದಗಡೆ ಪಲ್ಟಿಯಾಗಿದೆ.
ಇನ್ನು ದ್ವಿಚಕ್ರ ವಾಹನದ ಸವಾರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.