ಮಂಗಳೂರು, ಮೇ.26 (DaijiworldNews/PY): ಕೊರೊನಾ ವೇಳೆ ಜನರಿಗೆ ರೋಗದ ಬಗ್ಗೆ ಮಾಹಿತಿಯ ಅವಶ್ಯಕತೆ ಇರುತ್ತದೆ. ಈ ಹಿನ್ನಲೆ 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸೇರಿ ಹೊಸ ವೆಬ್ಸೈಟ್ವೊಂದನ್ನು ರಚಿಸಿದ್ದಾರೆ.
ನಗರದ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಸಿಬಿಎಸ್ಇ 12 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಅಮೋಲ್ ಮೆಂಡೊನ್ಸ ಮತ್ತು ಅದ್ವಿಕ್ ಅಭ್ಯುದಿತ್ ಹೆಗ್ಡೆ www.covidwarzonedk.com ಎಂಬ ವೆಬ್ಸೈಟ್ ಅನ್ನು ರಚಿಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ಜೆಇಇ ಪರೀಕ್ಷೆಯ ಕೋಚಿಂಗ್ ಪಡೆಯುತ್ತಿದ್ದು, ಈ ವೆಬ್ಸೈಟ್ ಅನ್ನು ಜನರ ಅನುಕೂಲಕ್ಕಾಗಿ ಪ್ರಾರಂಭಿಸಿದ್ದಾರೆ.
ಈ ವೆಬ್ಸೈಟ್ನಲ್ಲಿ ಕೊರೊನಾಕ್ಕೆ ಸಂಬಂಧಪಟ್ಟ ಸುದ್ದಿಗಳು ಸೇರಿದಂತೆ ಸರ್ಕಾರದ ನಿಯಮಾವಳಿಗಳು, ಕೊರೊನಾ ಸ್ಟಾಟಿಸ್ಟಿಕ್, ಆ್ಯಂಬುಲೆನ್ಸ್ ಸೇವೆ, ಮಂಗಳೂರಿನ ಹಾಸ್ಪಿಟಲ್ ಕುರಿತ ಮಾಹಿತಿ, ವೈದ್ಯರೊಂದಿಗೆ ಸಮಾಲೋಚನೆ, ಫುಡ್ ಡೆಲಿವರಿ ಸರ್ವಿಸ್ ಹಾಗೂ ಲ್ಯಾಬ್ ಮುಂತಾದವುಗಳ ಬಗ್ಗೆ ಮಾಹಿತಿ ನೀಡುತ್ತಿದೆ.
ಇದರಲ್ಲಿ ತಾಲೂಕುವಾರು ಮಾಹಿತಿಗಳನ್ನು ಸೇರಿಸಲು ಯೋಜನೆ ರೂಪಿಸಲಾಗುತ್ತಿದೆ. ಕೊರೊನಾಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ದೊರಕುವಂತೆ ಮಾಡಿದ ಈ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ.