ಪುತ್ತೂರು, ಮೇ.25 (DaijiworldNews/HR): ರೋಟರಿ ಪುತ್ತೂರು ಎಲೈಟ್ ಹಾಗೂ ಸಂಸಾರ ಜೋಡುಮಾರ್ಗ ಹೊರತಂದಿರುವ "ಲಾಕ್ಡೌನ್ ಲಾಕ್ಡೌನ್" ವಿಡಿಯೋ ಹಾಡನ್ನು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಲೈಬ್ರೇರಿಯನ್ ರಾಮ.ಕೆ. ಮಂಗಳವಾರ ಬಿಡುಗಡೆಗೊಳಿಸಿದರು.
ಮೌನೇಶ ವಿಶ್ವಕರ್ಮ ರಚಿಸಿರುವ ಈ ಹಾಡನ್ನು ಹಾಸನ ಜಿಲ್ಲೆಯ ಜನಪದ ಕಲಾವಿದ ದೊಡ್ಡಹಳ್ಳಿ ರಮೇಶ್ ರಾಗ ಸಂಯೋಜಿಸಿ ಹಾಡಿದ್ದಾರೆ.
ಕೊರೊನಾ ಹರಡುವಿಕೆಯ ಸರಪಳಿ ಕಡಿಯಲೆಂದು ಜಾರಿಯಲ್ಲಿರುವ ಲಾಕ್ಡೌನ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಕೊರೊನಾ ನಿಯಂತ್ರಣ, ನಿರ್ವಹಣೆ, ನಿರ್ಮೂಲನೆ ಪ್ರತಿಯೊಬ್ಬರ ಜವಬ್ದಾರಿ ಎನ್ನುವುದನ್ನು ನೆನಪಿಸುವ ಈ ವಿಡಿಯೋ ಹಾಡು, ಕೊರೊನಾ ನಿಗ್ರಹಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜೊತೆ ಸಹಕರಿಸುವಂತೆ ಮನವಿ ಮಾಡುತ್ತದೆ.
ಬಿಡುಗಡೆ ವೇಳೆ ರೋಟರಿ ಎಲೈಟ್ ನ ರೊ.ಆಸ್ಕರ್ ಆನಂದ್, ಸಂಸಾರ ಜೋಡುಮಾರ್ಗದ ನಿರ್ದೇಶಕ ರೊ.ಮೌನೇಶ ವಿಶ್ವಕರ್ಮ, ಮಾ.ರಿಷಬ್ ರಾಮ್ ಉಪಸ್ಥಿತರಿದ್ದರು.