ಉಳ್ಳಾಲ, ಅ 1 (MSP): ಉಳ್ಳಾಲದ ಅಂಗಡಿಯೊಂದರಿಂದ ಖರೀದಿಸಿದ್ದ ಮೊಟ್ಟೆಯನ್ನು ಆಮ್ಲೆಟ್ ಮಾಡಿದಾಗ ಅದು ಪ್ಲಾಸ್ಟಿಕ್ ನಂತಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮಾಡಿರುವ ವೀಡಿಯೋ ವೈರಲ್ ಆಗುತ್ತಿದ್ದು, ಈ ದೃಶ್ಯಾವಳಿಗಳನ್ನು ನೋಡಿದ ಸ್ಥಳೀಯರು ಉಳ್ಳಾಲಕ್ಕೂ ಪ್ಲಾಸ್ಟಿಕ್ ಮೊಟ್ಟೆ ಕಾಲಿಟ್ಟಿದೆ ಎನ್ನುವ ಆತಂಕ, ಭಯ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಬ್ಯಾರಿ ಭಾಷೆಯಲ್ಲಿ ಮಾತನಾಡುವ ಮಹಿಳೆಯೊಬ್ಬರು, ತಾನು ಉಳ್ಳಾಲದಲ್ಲಿರುವ ಅಂಗಡಿಯೊಂದರಲ್ಲಿ ತೆಗೆದುಕೊಂಡಿರುವ ಮೊಟ್ಟೆಯನ್ನು ಆಮ್ಲೆಟ್ ಮಾಡಿದಾಗ ಅದ ಪ್ಲಾಸ್ಟಿಕ್ ಆಮ್ಲೆಟ್ ನಂತೆ ಗೋಚರಿಸುತ್ತದೆ ಎಂದು ಮಾಡಿದ್ದ ಅಮ್ಲೇಟ್ ನ್ನು ಪ್ಲೇಟ್ ನಲ್ಲಿ ಹಾಕಿದ, ಮೊಬೈಲ್ ನಲ್ಲಿ ಚಿತ್ರೀಕರಣ ನಡೆಸಿದ್ದಾರೆ.
ಈ ವಿಡಿಯೋ ಭಾಗದಲ್ಲಿ ಮಹಿಳೆಯು ದ್ವನಿಯೊಂದಿಗೆ ಚಿಕ್ಕ ಮಗುವೊಂದು ಮಾತನಾಡುವ ಸುಮಾರು 49 ಸೆಕುಂಡ್ ಗಳ ಈ ವಿಡೀಯೋ ಇದೀಗ ಜಿಲ್ಲೆಯಾದ್ಯಂತ ವೈರಲ್ ಆಗುತ್ತಿದ್ದು ಜನರಲ್ಲಿ ಗೊಂದಲ ಮನೆಮಾಡಿದೆ. ಈ ವಿಡಿಯೋದಲ್ಲಿರುವ ಮಹಿಳೆಯೂ ಉಳ್ಳಾಲದ ಯಾವ ಪ್ರದೇಶದವರು ಮತ್ತು ಮೊಟ್ಟೆ ಯಾವ ಅಂಗಡಿಯಿಂದ ಖರೀದಿಸಿಲಾಗಿದೆ ಎನ್ನುವ ಮಾಹಿತಿ ಈ ದೃಶ್ಯಾವಳಿಯಲ್ಲಿ ನೀಡಿಲ್ಲ ಆದರೆ ಪದೇ ಪದೇ ಉಳ್ಳಾಲದಲ್ಲಿರುವ ಅಂಗಡಿಯಿಂದ ಖರೀದಿಸಿದ ಮೊಟ್ಟೆ ಸಂಪೂರ್ಣ ಪ್ಲಾಸ್ಟಿಕ್ ಆಗಿದೆ ಎಂದು ಆರೋಪಿಸಿದ್ದಾರೆ. ಮೊಟ್ಟೆಯಲ್ಲಿರುವ ಹಳದಿ ಭಾಗ ಮಾತ್ರ ಪ್ಲಾಸ್ಟಿಕ್ ನಂತೆ ಕಾಣುತ್ತಿಲ್ಲ ಎಂದು ಮಹಿಳೆ ವಿಡೀಯೋದಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಅಂಗಡಿಯಲ್ಲಿ ಮೊಟ್ಟೆ ಖರೀದಿಸುವ ಜನರು ಈ ವಿಡೀಯೋದಿಂದ ಹಿಂದೆ ಮುಂದೆ ನೋಡುವಂತಾಗಿದೆ.