ಕಾಸರಗೋಡು, ಮೇ.24 (DaijiworldNews/HR): ಜಿಲ್ಲೆಯಲ್ಲಿ ಸೋಮವಾರ ಕೊರೊನಾ ಸೋಂಕು ಪ್ರಮಾಣ ಇಳಿಕೆಯಾಗಿದ್ದು, ಒಂದು ತಿಂಗಳ ಬಳಿಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500 ಕ್ಕಿಂತ ಇಳಿಕೆ ಕಂಡಿದೆ.
ಸೋಮವಾರ 444 ಮಂದಿಗೆ ಸೋಂಕು ದೃಢಪಟ್ಟಿದ್ದು, 845 ಮಂದಿ ಗುಣಮುಖವಾಗಿದೆ.
ಜಿಲ್ಲೆಯಲ್ಲಿ ಈಗ 7897 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 33,530 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ 68,023 ಮಂದಿಗೆ ಇದುವರೆಗೆ ಸೋಂಕು ತಗಲಿದ್ದು, 59,645 ಮಂದಿ ಗುಣಮುಖರಾಗಿದ್ದಾರೆ.