ಮಂಗಳೂರು, ಮೇ 19 (DaijiworldNews/MS): ಬಿಜೈಯಲ್ಲಿ ವೈದ್ಯಕೀಯ ಉಪಕರಣಗಳ ಸರಬರಾಜು ವ್ಯವಹಾರ ನಡೆಸುತ್ತಿರುವ ಉದ್ಯಮಿಗೆ ವಂಚಿಸಲಾಗಿದೆ.
ಆಕ್ಸಿಜನ್ ಕನ್ಸಂಟ್ರೇಟರ್ಸ್ ಒದಗಿಸುವ ಬಗ್ಗೆ ಇಂಡಿಯಾ ಮಾರ್ಟ್ ವೆಬ್ ಸೈಟ್ ನಲ್ಲಿ ಉದ್ಯಮಿ ನೋಂದಣಿ ಮಾಡಿದ್ದರು. ಮೇ 13ರಂದು ಮುಂಬೈ ಡೊಂಬಿವಿಲಿಯ ಓಂ ಸಾಯಿ ಎಂಟರ್ಪ್ರೈಸಸ್ ಸಂಸ್ಥೆಯವರಿಂದ ತಿಳಿಸಿ ಉಪಕರಣ ಸರಬರಾಜು ಮಾಡುವುದಾಗಿ 11.86 ಲಕ್ಷ ರೂ. ಖಾತೆಗೆ ವರ್ಗಾಯಿಸಿ ಉಪಕರಣ ಸರಬರಾಜು ಮಾಡದೆ ಮೋಸ ಮಾಡಿದ್ದಾರೆ ಎಂದು ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ