Karavali
ಮಂಗಳೂರು: 'ಡೀನೆಟ್ ಸರ್ವೀಸಸ್ ಪ್ರೈ. ಲಿ.' ಪರಿಚಯಿಸಿದೆ 199 ರೂ.ಗೆ ಅನಿಯಮಿತ ಇಂಟರ್ನೆಟ್ ಪ್ಲ್ಯಾನ್
- Tue, May 18 2021 11:46:02 AM
-
ಮಂಗಳೂರು, ಮೇ 18 (DaijiworldNews/MS): ಮಂಗಳೂರು ಮೂಲದ ಡೀನೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕೈಗೆಟುಕುವ ವೆಚ್ಚದಲ್ಲಿ ಅನಿಯಮಿತ ಇಂಟರ್ನೆಟ್ ಡೇಟಾವನ್ನು ನೀಡುವ ಮೂಲಕ ಗ್ರಾಹಕರ ಮನಗೆದ್ದಿದೆ.
ಗ್ರಾಹಕರಿಗೆ ಕೈಗೆಟುಕುವ ವೆಚ್ಚದಲ್ಲಿ ಇಂಟರ್ನೆಟ್ ಒದಗಿಸಬೇಕೆನ್ನುವ ಕನಸು ಹೊತ್ತು ವ್ಯವಸ್ಥಾಪಕ ನಿರ್ದೇಶಕ ಸಂದೇಶ್ ಪೂಜಾರಿ ನೇತೃತ್ವದಲ್ಲಿ ಏಳು ವರ್ಷಗಳ ಹಿಂದೆ ಹುಟ್ಟಿದ್ದ ಸಂಸ್ಥೆಯೇ " ಡೀನೆಟ್ ". ಆದರೆ ಇದು ಇಂದು ಆಪ್ಟಿಕಲ್ ಫೈಬರ್ ನೆಟ್ವರ್ಕ್ ಮೂಲಕ "ಪ್ರಮುಖ ಇಂಟರ್ನೆಟ್ ಪೂರೈಕೆದಾರ"ರಲ್ಲಿ ಒಂದಾಗಿದೆ. ಈಗಾಗಲೇ ಡೀನೆಟ್ ತನ್ನ ಗ್ರಾಹಕರಿಗೆ ಉತ್ತಮ ಹಾಗೂ ಕ್ಷಿಪ್ರ ಸೇವೆಯೊಂದಿಗೆ ಜಿಲ್ಲೆಯಲ್ಲಿ ಖ್ಯಾತಿಯನ್ನು ಗಳಿಸಿದೆ.
ಡೀನೆಟ್ ಇಂದು ಜಿಲ್ಲೆಯಾದ್ಯಂತ 15,000ಕ್ಕೂ ಹೆಚ್ಚು ಸಂಪರ್ಕಗಳನ್ನು ಹೊಂದಿದ್ದು ಇತರ ಜಿಲ್ಲೆಗಳಲ್ಲೂ 5,000 ಸಂಪರ್ಕಗಳನ್ನು ಫ್ರಾಂಚೈಸಿಗಳ ಮೂಲಕ ಹೊಂದಿದೆ. ದೂರಸಂಪರ್ಕ ಇಲಾಖೆಯಿಂದ ಪರವಾನಗಿ ಹೊಂದಿರುವ ಮಂಗಳೂರು ನಗರ ಏಕೈಕ ಸಂಸ್ಥೆ ಇದಾಗಿದ್ದು, ಡಿನೇಶ್ ತನ್ನದೇ ಆದ ಡೇಟಾ ಸೆಂಟರ್ ಹೊಂದಿದೆ.
ಡೀನೆಟ್ ಇದೀಗ 15 ಎಮ್ಬಿಪಿಎಸ್ ವೇಗದಲ್ಲಿ 199 ರೂ.ಗೆ ಆಕರ್ಷಕ ಹೊಸ ಪ್ಯಾಕೇಜ್ ಆಕರ್ಷಕ ಪ್ಯಾಕೇಜ್ ಗಳನ್ನು ಘೋಷಿಸಿದ್ದು ಗ್ರಾಹಕರು ಕೈಗೆಟುಕುವ ವೆಚ್ಚದಲ್ಲಿ ಆನಂದಿಸಬಹುದಾಗಿದೆ.
ಡೀನೆಟ್ ಪ್ಲ್ಯಾನ್ (ಡೇಟಾ ಅನಿಯಮಿತ)
Steady 50 Mbps Rs 399
Startup 60 Mbps Rs 499
Bounce 75 Mbps Rs 599
Raise 100 Mbps Rs 699
Fast 150 Mbps Rs 799
Allegro 200 Mbps Rs 999
Presto 300 Mbps Rs 1,499
Molto 500 Mbps Rs 1,999
Turbo 1Gbps Rs 2,999
ಹೊಸಬರಿಗೆ ಹಾಗೂ ತೀರಾ ಅವಶ್ಯವಿರುವವರಿಗೆ ಉದ್ಯೋಗ:
"ಸಂಸ್ಥೆ ಹುಟ್ಟುಹಾಕಿ ಒಂದು ವರ್ಷದವರೆಗೆ 15 ಗ್ರಾಹಕ ಸಂಪರ್ಕಗಳನ್ನು ಸಾಧಿಸುವುದು ತುಂಬಾ ಕಷ್ಟಕರವಾಗಿತ್ತು. ನಾನು ಒಬ್ಬಂಟಿಗನಾಗಿ ಎಲ್ಲಾ ಕಷ್ಟಗಳನ್ನು ಎದುರಿಸಿ ಕೆಲಸ ಮಾಡಿದೆ. 50 ಹೆಚ್ಚು ಗ್ರಾಹಕರು ಸಂಪರ್ಕ ಪಡೆದ ಬಳಿಕ ನಿಧಾನವಾಗಿ ಉದ್ಯೋಗಿಗಳನ್ನು ನೇಮಿಸಲು ಪ್ರಾರಂಭಿಸಿದೆ. ಇಂದು, ನಮ್ಮ ಸಂಸ್ಥೆಯಲ್ಲಿ 60 ಕ್ಕೂ ಹೆಚ್ಚು ಉದ್ಯೋಗಿಗಳು ಕಷ್ಟಪಟ್ಟು ದುಡಿಯುತ್ತಿದ್ದಾರೆ. ನಾನು ನಿರುದ್ಯೋಗಿಯಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ ಪರಿಣಾಮ ಹಾಗೂ ಕೆಲಸದ ಅನುಭವವಿಲ್ಲದೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಎಷ್ಟು ಕಷ್ಟವಿದೆ ಎನ್ನುವುದು ಅರಿವಿದ್ದು ಉದ್ಯೋಗಿಗಳ ಆಯ್ಕೆಯಲ್ಲೂ ಹೊಸಬರಿಗೆ ಮತ್ತು ಉದ್ಯೋಗದ ತೀರಾ ಅಗತ್ಯವಿರುವ ನಮ್ಮ ಸಂಸ್ಥೆ ಮೊದಲ ಆದ್ಯತೆ ನೀಡುತ್ತದೆ. ಹೀಗಾಗಿಯೇ ಡೀನೆಟ್ ನಲ್ಲಿ ಕೆಲಸ ಮಾಡುವ ನನ್ನೆಲ್ಲಾ ಉದ್ಯೋಗಿಗಳು ಪ್ರಾಕ್ಟಿಕಲ್ ಎಂಜಿನಿಯರ್ ಗಳಾಗಿದ್ದಾರೆ" ಎಂದು ಸಂದೇಶ್ ವಿವರಿಸುತ್ತಾರೆ.
ಡಿನೇಟ್ ಸಂಸ್ಥೆ ಹುಟ್ಟಿದ್ದು ಹೇಗೆ ?
ಡಿನೇಟ್ ವ್ಯವಸ್ಥಾಪಕ ನಿರ್ದೇಶಕ ಸಂದೇಶ ಪೂಜಾರಿ ಅವರು 2003ರಲ್ಲಿ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬಿ.ಕಾಂ ಪದವೀಧರನಾಗಿ ಹೊರಬಂದ ಬಳಿಕ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದು, ಇದರೊಂದಿಗೆ ಆನಿಮೇಷನ್ ಕೋರ್ಸ್ ಕೂಡ ಮಾಡಿದ್ದರು. 2007ರಲ್ಲಿ ಹೈದರಾಬಾದ್ ಗೆ ತೆರಳಿ ಅಲ್ಲಿ ಡಿಕ್ಯೂ ಎಂಟರ್ಟೈನ್ಮೆಂಟ್ನಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೂ ತಮ್ಮೂರು ಮಂಗಳೂರಿನ ಸೆಳೆತ ಇದ್ದೇ ಇತ್ತು. ಹೀಗಾಗಿ ಸಂದೇಶ್ 2014ರಲ್ಲಿ ಹೈದರಾಬಾದ್ನಿಂದ ಹಿಂತಿರುಗಿ ಇಲ್ಲೇ ವ್ಯವಹಾರ ಮಾಡಬೇಕು ಎನ್ನುವ ಕನಸು ಕಂಡಿದ್ದರು.
ಒಂದು ದಿನ ಅವರು ಪಡೆದಿದ್ದ ಇಂಟರ್ನೆಟ್ ಸಂಪರ್ಕ ನಿಧಾನವಾಗಿದ್ದಾಗ, ಇಂಟರ್ನೆಟ್ ಸರಬರಾಜಿನ ಬಗ್ಗೆ ಕುತೂಹಲವಾಗಿ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾರಂಭಿಸಿದರು. ಆ ಬಳಿಕ ಸಂದೇಶ್ ದೂರಸಂಪರ್ಕ ವಿಭಾಗವನ್ನು ಸಂಪರ್ಕಿಸಿ ಪರವಾನಗಿ ಬಗ್ಗೆ ಮಾಹಿತಿ ಪಡೆದರು. ಇದರೊಂದಿಗೆ ಹೈದರಾಬಾದ್ನಿಂದ ಹಿಂತಿರುಗಿದ ಬಳಿಕ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಈ ಮದ್ಯೆ ಮೊಬೈಲ್ ರೀಚಾರ್ಜ್ ಅಂಗಡಿ ತೆರೆದರು. ಇಂಟರ್ನೆಟ್ ಪೂರೈಕೆಗಾಗಿ ಹೂಡಿಕೆ ಮಾಡಿದ ನಂತರ, ಅವರು ರೆಡ್ ಬಿಲ್ಡಿಂಗ್ನಲ್ಲಿ 30 ಮೀಟರ್ ನ ಟವರ್ ನಿರ್ಮಿಸಿದರು. ಆ ಬಳಿಕ ಡಿನೆಟ್ ನ ಮೊದಲ 500 ಸಂಪರ್ಕಗಳು ವೈರ್ಲೆಸ್ ಆಗಿದ್ದವು.
"ವಿನ್ಸೆಂಟ್ ಕಾರ್ಲೊ " ಡೀನೆಟ್ ನ ಮೊದಲ ಗ್ರಾಹಕ. ಇಲ್ಲಿಂದ ಪ್ರಾರಂಭವಾದ ಡಿನೆಟ್ ಪಯಣ 15 ಸಂಪರ್ಕಗಳಿಗೆ, ಒಂದು ವರ್ಷದ ಅವಧಿ ತೆಗೆದುಕೊಂಡಿತು. ಆ ಬಳಿಕ ಗ್ರಾಹಕರ ಬಾಯಿ ಮಾತಿನ ಪ್ರಚಾರಗಳೇ ಮತ್ತಷ್ಟು ಹೊಸ ಗ್ರಾಹಕರನ್ನು ಹೊಂದಲು ಸಹಾಯ ಮಾಡಿತು. ಹೀಗೆ ಪ್ರಾರಂಭವಾದ ಡಿನೆಟ್ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಡೀನೆಟ್ ಸ್ಥಾಪಿಸುವ ಪಯಣದಲ್ಲಿ ತನ್ನನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ರೆಡ್ ಬಿಲ್ಡಿಂಗ್ನ ಮಾರ್ಕ್ ಮೆನೆಜೆಸ್ ಅವರನ್ನು ನೆನೆಯಲೇಬೇಕು ಎನ್ನುತ್ತಾರೆ ಸಂದೇಶ್. ಆ ಬಳಿಕ 2015 ರಲ್ಲಿ, ಡೀನೆಟ್ ಮೂವರು ನಿರ್ದೇಶಕರಾದ ನಾರಾಯಣ ಹೊಳ್ಳ, ಅಶೋಕ್ ಮತ್ತು ಶ್ವೇತಾ ಅವರೊಂದಿಗೆ ಡೀನೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆಗಿ ಮಾರ್ಪಟ್ಟಿತು.
ದಾವಣಗೆರೆ, ಗುಲ್ಬರ್ಗಾ, ಸಿರಸಿ, ಮಡಿಕೇರಿ, ಹುಬ್ಬಳ್ಳಿ, ದಾವೇರಿ ಮತ್ತು ಕುಂದಾಪುರದಲ್ಲಿ ಡೀನೆಟ್ ತನ್ನ ಫ್ರಾಂಚೈಸಿಗಳನ್ನು ಹೊಂದಿದೆ. ಬೆಳಗಾವಿಯಲ್ಲೂ ಫ್ರಾಂಚೈಸಿಗಳನ್ನು ಸ್ಥಾಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ದಕ್ಷಿಣ ಕನ್ನಡದಲ್ಲಿ, ಬೆಳ್ತಂಗಡಿ, ಮೂಡುಬಿದ್ರಿ, ಕಾರ್ಕಳ, ಪುತ್ತೂರು, ಸುಳ್ಯ ಮತ್ತು ಮುಲ್ಕಿ ಮುಂತಾದೆಡೆ ಫ್ರಾಂಚೈಸಿಗಳಿವೆ.
ಅದರ ಆರಂಭಿಕ ದಿನಗಳಲ್ಲಿ, ಇಂಟರ್ನೆಟ್ ಪ್ಯಾಕೇಜುಗಳು ಕ್ರಮವಾಗಿ 600 ಮತ್ತು 1,600 ರೂಗಳ ವೆಚ್ಚದಲ್ಲಿ 512 Mbps ನಿಂದ 4 Mbps ವರೆಗೆ ಪ್ರಾರಂಭವಾಯಿತು. ಇಂದು ಡೀನೆಟ್ ಯೆನೆಪೊಯಾ, ಸೇಂಟ್ ಜೋಸೆಫ್ಸ್ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ 60 ಕ್ಕೂ ಹೆಚ್ಚು ವಾಣಿಜ್ಯ ಸಂಪರ್ಕವನ್ನು ಪಡೆದಿರುವ ಪ್ರತಿಷ್ಟಿತ ಗ್ರಾಹಕರನ್ನು ಹೊಂದಿದೆ.
ಡೀನೆಟ್ ಭವಿಷ್ಯದ ಯೋಜನೆಗಳು:
ಡೀನೆಟ್ 15 ಎಮ್ಬಿಪಿಎಸ್ ವೇಗದ 199 ರೂಗಳಿಗೆ ಹೊಸ ಪ್ಯಾಕೇಜ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಿಗೆ ಉಪಯುಕ್ತವಾಗಿದೆ. ಕೈಗೆಟುಕುವ ವೆಚ್ಚದಲ್ಲಿ ಅಂತರ್ಜಾಲವು ಪ್ರತಿ ಮನೆಯನ್ನೂ ತಲುಪುವುದು ಈ ಪ್ಯಾಕೇಜ್ ನ ದರ ಪ್ರಮುಖ ಉದ್ದೇಶವಾಗಿದೆ . ಇದರೊಂದಿಗೆ ಜೂನ್ ತಿಂಗಳಲ್ಲಿ, ಡೀನೆಟ್ ಐಪಿಟಿವಿ ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳಾದ ಝೀ5 , ವೂಟ್, ಸೋನಿliv ಮತ್ತು ಶೆಮರೂ ಪ್ಯಾಕೇಜ್ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.