ಬಾದಾಮಿ, ಸೆ28(SS): ನೀರವ್ ಮೋದಿ, ವಿಜಯ ಮಲ್ಯ ಇವರ ಜೊತೆ ಮಾತಾಡಿಕೊಂಡೇ ವಿದೇಶಕ್ಕೆ ಹೋಗಿದ್ದಾರೆ. ಜನರ ದುಡ್ಡು ಲೂಟಿ ಹೊಡೆಯಲು ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಕುಮ್ಮಕ್ಕು ನೀಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಾದಾಮಿಯಲ್ಲಿ ಮಾತನಾಡಿದ ಅವರು, ಬಹುಕೋಟಿ ರೂ. ವಂಚನೆ ಆರೋಪಗಳಲ್ಲಿ ಆರೋಪಿಗಳಾಗಿರುವ ನೀರವ್ ಮೋದಿ, ವಿಜಯ ಮಲ್ಯ ಅವರಿಗೆಲ್ಲ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕುಮ್ಮಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆ ಕೆಲ ದಿನಗಳ ಹಿಂದೆ ಪುರಸಭೆ ಚುನಾವಣೆಯಲ್ಲಿ ಶೇ.30 ರಷ್ಟು ಜನ ಮಾತ್ರ ಕೋಮುವಾದಿಗಳ ವಿರುದ್ಧ ಮತ ಚಲಾವಣೆ ಮಾಡಿದ್ದಾರೆ. ಕೋಮುವಾದಿಗಳು ಯಾವ ಕಾರಣಕ್ಕೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು. ಅವರು ಜಾತಿ-ಧರ್ಮದ ನಡುವೆ ಜಗಳದ ಕಿಚ್ಚನ್ನು ಹೆಚ್ಚು ಮಾಡುತ್ತಿದ್ದಾರೆ ಎಂದು ಹೇಳಿದರು.
ನಾಲ್ಕುವರೆ ವರ್ಷದಲ್ಲಿ ಮೋದಿ ಏನ್ ಮಾಡಿದ್ದಾರೆ. ಚೌಕಿದಾರನಾಗಿ ಕೆಲಸ ಮಾಡುವೆ ಎಂದಿದ್ದ ಪ್ರಧಾನಿ ಮೋದಿಯ ಮುಖವಾಡ ಇದೀಗ ಕಳಚಿ ಬಿದ್ದಿದೆ. ಸಿಲಿಂಡರ್ ಬೆಲೆ 400 ಇದ್ದಿದ್ದು 800 ರೂ. ಆಗಿದೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ಹಗರಣ ನಡೆದಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದರೆ ಇದುವೆಯೇ ಎಂದು ಪ್ರಶ್ನಿಸಿದರು.
ಬಾದಾಮಿಯಲ್ಲಿ ಕಳೆದ 4 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದಿನ 2 ವರ್ಷದ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು, ಬಾದಾಮಿಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದ್ದಾರೆ.