ನವದೆಹಲಿ, ಸೆ 27(SM): ರಾಮ ಜನ್ಮ ಭೂಮಿ ಅಯೋಧ್ಯಾ ಜಮೀನು ವಿವಾದ ಅಂತಿಮ ಘಟ್ಟಕ್ಕೆ ತಲುಪಿದೆ. ಕೊನೆಯ ತೀರ್ಪಿಗೂ ಮುನ್ನ ಮಸೀದಿಯಲ್ಲಿ ನಮಾಜು ಮಾಡುವ ಬಗ್ಗೆ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಸುಪ್ರೀಂಕೋರ್ಟಿನ ಪಂಚ ಸದಸ್ಯರ ಪೀಠ ಇಂದು ನೀಡಿದ ತೀರ್ಪಿಗೆ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಸುಪ್ರೀಂಕೋರ್ಟಿನ ತೀರ್ಪಿನಿಂದಾಗಿ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇದ್ದ ತಡೆ ಮುಕ್ತವಾಗಿದೆ.
ಅಕ್ಟೋಬರ್ 29ರಿಂದ ರಾಮಜನ್ಮ ಭೂಮಿ ಜಮೀನು ವಿವಾದ ವಿಚಾರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, 'ದೀಪಾವಳಿಗೂ ಮುನ್ನ ಮಂದಿರ ನಿರ್ಮಾಣವಾಗುವ ನಿರೀಕ್ಷೆ ಹೊಂದಿದ್ದೇನೆ' ಎಂದರು. ಇಂದಿನ ಪ್ರಕರಣವು ಪ್ರಾರ್ಥನಾ ಮಂದಿರದ ಜಮೀನು ವಿವಾದಕ್ಕೆ ಹೊರತಾಗಿದ್ದು, ರಾಮ ಜನ್ಮ ಭೂಮಿ ವಿವಾದದ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದೆ ಎಂದರು.
'ಮಸೀದಿಯನ್ನು ಅವಿಭಾಜ್ಯ ಅಂಗ ಅಲ್ಲ' ಎನ್ನಲು ಸಾಧ್ಯವಿಲ್ಲ, ಎಂದು ವಾದಿಸಿದ್ದ ಸುನ್ನಿ ವಕ್ಫ್ ಬೋರ್ಡ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು 1994ರ ಇಸ್ಮಾಯಿಲ್ ಫಾರುಕಿ ತೀರ್ಪನ್ನು ಪ್ರಶ್ನಿಸಿ 7 ಸದಸ್ಯರ ವಿಸ್ತೃತ ಸಂವಿಧಾನ ಪೀಠ ರಚನೆ ಮಾಡಿ, ಪ್ರಕರಣವನ್ನು ವರ್ಗಾಯಿಸಲು ಕೋರಿದ್ದರು. ಆದರೆ, ಇದನ್ನು ಸುಪ್ರೀಂಕೋರ್ಟಿನ ಪಂಚ ಸದಸ್ಯರ ಪೀಠ ಒಪ್ಪಿಲ್ಲ ಈ ಮೂಲಕ ಹಿಂದೂಗಳಿಗೆ ಈ ತೀರ್ಪು ನೆರವಾಗಲಿದೆ ಎಂದು ಹೇಳಿದರು.