ಮಂಗಳೂರು,ಸೆ 27 (MSP): ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ (ಎಐಒಸಿಡಿ) ಸೆ.28ರ ಶುಕ್ರವಾರ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದು. ದೇಶಾದ್ಯಂತ ಮುಷ್ಕರ ನಡೆಯಲಿದ್ದು, ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ ಬಂದ್ ಆಗಲಿದೆ. ಇನ್ನು ಆನ್ ಲೈನ್ ಮೂಲಕ ಔಷಧ ಖರೀದಿಗೆ ಅವಕಾಶ ನೀಡಬಾರದೆಂಬ ಆಗ್ರಹಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಮೆಡಿಕಲ್ ಅಂಗಡಿಗಳು ಬೆಂಬಲ ವ್ಯಕ್ತಪಡಿಸಿದ್ದು ಈ ಹಿನ್ನಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಎಲ್ಲಾ ಮೆಡಿಕಲ್ ಅಂಗಡಿಗಳು ಬಂದ್ ಆಚರಿಸಲಿವೆ.
ದ.ಕ ಜಿಲ್ಲೆಯಲ್ಲಿರುವ 625 ಮೆಡಿಕಲ್ ಶಾಪ್ ಗಳಲ್ಲಿ ಅಂದು ಸೇವೆ ಅಲಭ್ಯವಾಗಲಿದೆ. ಅನ್ ಲೈನ್ ಮೂಲಕ ಔಷದ ಖರೀದಿ ನಡೆದರೆ ಗುಣಮಟ್ಟ ಮತ್ತು ಬಳಕೆಯ ವಿಧಾನದ ಬಗ್ಗೆ ಜನರಿಗೆ ಮಾಹಿತಿ ಸಿಗುವುದಿಲ್ಲ. ಅಲ್ಲದೆ ರೋಗಿಗಳ ಆರೋಗ್ಯದ ಮೇಲೆಯೂ ಇದು ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಬಂದ್ ನಡೆಯಲಿದೆ. ಆದರೂರು ಕೆಲವು ಸಾಮಾಜಿಕ ಹೊಣೆಯನ್ನು ನಿಭಾಯಿಸಲು ತುರ್ತು ಜೀವರಕ್ಷಕ ಔಷಧ ಒದಗಿಸಲು ಸಿದ್ದರಿದ್ದು ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಂಘದ ದ.ಕ ಜಿಲ್ಲಾಧ್ಯಕ್ಷ ಶ್ರೀಧರ್ ಕಾಮತ್ ತಿಳಿಸಿದ್ದಾರೆ. ಇನ್ನು ಆಸ್ಪತ್ರೆ ನರ್ಸಿಂಗ್ ಹೋಂ ನ ಮೆಡಿಕಲ್ ಶಾಪ್ ಗಳು ಅಂದು ತೆರೆದಿರುತ್ತದೆ. ’ ಆನ್ಲೈನ್ ಮೂಲಕ ಔಷಧ ಖರೀದಿಯಿಂದ 1.5 ಕೋಟಿ ಅವಲಂಬಿತ ಕುಟುಂಬಗಳು ಆತಂಕಕ್ಕೆ ಸಿಲುಕಿವೆ ಎಂದು ಎಐಒಸಿಡಿ ಹೇಳಿದೆ.