ಉಡುಪಿ, ಮೇ 13 (DaijiworldNews/MB) : ಕೋವಿಡ್, ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನರು ಉಡುಪಿ ನಗರದಲ್ಲಿನ ಲಸಿಕಾ ಕೇಂದ್ರಗಳಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಲಸಿಕೆಯನ್ನು ಪಡೆಯುತ್ತಿದ್ದು, ಈ ಅನಾನುಕೂಲತೆಯನ್ನು ತಪ್ಪಿಸಲು ಮೊದಲ ಡೋಸ್ ಪಡೆದ ದಿನಾಂಕದ ಜೇಷ್ಠತೆ ಆಧಾರದಲ್ಲಿ (Seniority of first dose date) ಬರುವ ಅರ್ಹ ವ್ಯಕ್ತಿಗಳಿಗೆ ಉಡುಪಿ ಜಿಲ್ಲಾಡಳಿತದಿಂದ ಮುಂಚಿನ ದಿನವೇ ಎಸ್ಎಮ್ಎಸ್ ಕಳುಹಿಸಿ ಲಸಿಕೆ ಪಡೆಯಲು ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ತಿಳಿಸಿದ್ದಾರೆ.
ಉಡುಪಿ ನಗರದಲ್ಲಿರುವ ಸೈಂಟ್ ಸಿಸಿಲೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರದಲ್ಲಿ 100 ಡೋಸ್ ಮತ್ತು ನಗರ ಆರೋಗ್ಯ ಕೇಂದ್ರ, ವೇಣುಗೋಪಾಲ ದೇವಸ್ಥಾನದ ಬಳಿ, ಮಣಿಪಾಲದ ಲಸಿಕಾ ಕೇಂದ್ರದಲ್ಲಿ - 70 ಡೋಸ್ ಲಸಿಕೆಯನ್ನು ಮೇ 13 ರಂದು ಬೆಳಿಗ್ಗೆ 10.00 ರಿಂದ ಸಂಜೆ: 4.00 ಗಂಟೆಯೊಳಗೆ ನೀಡಲಾಗುವುದು. ಎರಡನೇ ಡೋಸ್ ಲಸಿಕೆ ಪಡೆಯಲು ಎಸ್ಎಮ್ಎಸ್ ಪಡೆದವರು ದಾಖಲೆಯೊಂದಿಗೆ ಸರಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯುವುದು, ಮುಂದೆ ಲಸಿಕೆಗಳು ಸರಬರಾಜಾದಂತ ಇದೇ ರೀತಿ ಜೇಷ್ಟತ ಆಧಾರದಲ್ಲಿ ಎಸ್ಎಮ್ಎಸ್ ಕಳುಹಿಸಲಾಗುವುದು, ಅದರಂತ ಎಸ್ಎಂಎಸ್ ಪಡೆದವರು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯುವುದು ಎಂದು ಪ್ರಕಟಣೆ ತಿಳಿಸಿದೆ.