ಮಂಗಳೂರು, ಮೇ 13 (DaijiworldNews/MB) : ಖ್ಯಾತ ಕೊಂಕಣಿ ಗಾಯಕ, ಹಾಸ್ಯನಟ, ನಾಟಕ ಬರಹಗಾರ ಮತ್ತು ನಿರ್ದೇಶಕ ಫೆಲಿಕ್ಸ್ ಲಸ್ರಾದೋ ಮೇ 13 ರ ಗುರುವಾರ ನಿಧನರಾದರು.
ಅವರಿಗೆ 52 ವರ್ಷ ಪ್ರಾಯವಾಗಿತ್ತು. ಫೆಲಿಕ್ಸ್ ಅವರು ತಮ್ಮ 17 ನೇ ವಯಸ್ಸಿನಲ್ಲಿ ಗಾಯನ ಆರಂಭಿಸಿದ್ದು ಬಳಿಕ ಅವರು ಮಾಂಡ್ ಸೋಭನ್ ಸಂಗೀತ ಆಲ್ಬಮ್ಗಳಿಗೆ ಹಾಗೂ ಫಾ. ವಾಲ್ಟರ್ ಡಿ ಸೋಜಾ, ಫಾ. ರೊನಾಲ್ಡ್ ಸೆರಾವ್, ಫಾ. ಕ್ಲೆಮೆಂಟ್ ಮತ್ತು ಇತರರ ಭಕ್ತಿ ಗೀತೆಗಳ ಆಲ್ಬಮ್ಗಳಿಗೆ ಧ್ವನಿ ನೀಡಿದ್ದರು
ಮಂಗಳೂರಿನ ಕೊಂಕಣಿ ನಾಟಕ ಸಭಾದಿಂದ ಫೆಲಿಕ್ಸ್ ಅವರು ಕೊಂಕಣಿ ಯುವ ಪುರಾಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಂದು ದಶಕದ ಹಿಂದೆ ಮಂಗಳೂರಿನ ಸುತ್ತಲೂ ಆಯೋಜಿಸಲಾಗುತ್ತಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಅವರು ನಿಯಮಿತವಾಗಿ ಪ್ರದರ್ಶನ ನೀಡುತ್ತಿದ್ದರು.
ಹಾಡುಗಾರಿಕೆಯೊಂದಿಗೆ ನಟನಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದ ಫೆಲಿಕ್ಸ್ ತಮ್ಮ ಹಾಸ್ಯ ಪಾತ್ರಗಳಿಗಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾರೆ.
ದಾಯ್ಜಿ ದುಬೈ ಆಯೋಜಿಸಿದ್ದ ನಾಟಕ ಉತ್ಸವದಲ್ಲಿ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಅವರು ಅನೇಕ ರಂಗ ನಾಟಕಗಳಿಗೆ ಹಾಡುಗಳನ್ನು ಬರೆದಿದ್ದಾರೆ. ಅವರ ’ಕೆಸಾರ್ ಕಲೋ’ ಹಾಡು ಅವರನ್ನು ಕೊಂಕಣಿ ಜಗತ್ತಿನ ಅತ್ಯುತ್ತಮ ಹಾಡಾಗಿ ಚಿರಪರಿಚಿತಗೊಳಿಸಿದೆ.