ಮಂಗಳೂರು,ಸೆ 27 (MSP): ನಗರದ ಜಿ ಎಚ್ ಎಸ್ ರಸ್ತೆಯಲ್ಲಿರುವ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ್ದು, ಅಗ್ನಿಶಾಮಕದ ದಳ ಸಿಬ್ಬಂದಿಗಳು ಸ್ಥಳಕ್ಕೆ ಭೆಟಿ ನೀಡಿ ಬೆಂಕಿ ನಂದಿಸಿದ್ದಾರೆ. ಜನತಾ ಬಜಾರ್ ಬಳಿಯ ಕಾಮತ್ ಅಂಡ್ ಕೋ ಸೆಲೆಕ್ಷನ್ ಸೆಂಟರ್ ಬಟ್ಟೆ ಅಂಗಡಿಯಲ್ಲಿ ಸೆ. 27 ರ ಗುರುವಾರ ಬೆಳಗ್ಗೆ ಈ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿಗಳು ಅಕ್ಕ ಪಕ್ಕದ ಅಂಗಡಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇರುವುದರಿಂದ ಬೆಂಕಿ ಹತೋಟಿಗೆ ತರಲು ಹರಸಾಹಸ ಪಟ್ಟು ಶ್ರಮಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಆಗ್ನಿ ಅವಘಡ ನಡೆದಿರಬಹುದೆಂದು ಶಂಕಿಸಲಾಗಿದೆ. ಘಟನೆಯಿಂದ ಅಪಾರ ನಷ್ಟ ಸಂಭವಿಸರಬಹುದೆಂದು ಅಂದಾಜಿಸಲಾಗಿದೆ
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಮೇಯರ್ ಬಾಸ್ಕರ್ ಮೊಯ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.