ಮಂಗಳೂರು, ಮೇ 12 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಬುಧವಾರದಂದು ಜಿಲ್ಲೆಯಲ್ಲಿ 1077 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 919 ಮಂದಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.
ದ.ಕ. ಜಿಲ್ಲೆಯಲ್ಲಿ ಬುಧವಾರದ ಕೊರೋನಾ ರಿಪೋರ್ಟ್:
1077 ಬುಧವಾರ ಪತ್ತೆಯಾದ ಪಾಸಿಟಿವ್ ಪ್ರಕರಣಗಳು
1030 ಬುಧವಾರದಂದು ಗುಣಮುಖರಾಗಿ ಬಿಡುಗಡೆ
ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು-12673 ಮಂದಿ
ಬುಧವಾರ ಇಬ್ಬರು ಸೋಂಕಿಗೆ ಬಲಿ
ದ.ಕ. ಜಿಲ್ಲೆಯ ಒಟ್ಟು ಕೋವಿಡ್ ಸಾವುಗಳು-795
46073-ಒಟ್ಟು ಗುಣಮುಖರಾಗಿ ಬಿಡುಗಡೆಗೊಂಡವರು
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು-59543
ಉಡುಪಿ ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್:
ಉಡುಪಿಯಲ್ಲಿ ಬುಧವಾರ 919 ಮಂದಿಯಲ್ಲಿ ಸೋಂಕು
ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 42,736ಕ್ಕೆ ಏರಿಕೆ
ಸದ್ಯ ಜಿಲ್ಲೆಯಲ್ಲಿ 6952 ಸಕ್ರಿಯ ಪ್ರಕರಣಗಳಿವೆ
ಬುಧವಾರ ಕೊವಿಡ್ ಸೋಂಕಿಗೆ 6 ಮಂದಿ ಬಲಿ
ಈವರೆಗೆ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 245 ಮಂದಿ ಬಲಿ
906 ಮಂದಿಗೆ ಹೊಂ ಐಸೋಲೇಶನ್ ನಲ್ಲಿ ಚಿಕಿತ್ಸೆ
ಮತ್ತೆ 837 ಮಂದಿ ಗುಣಮುಖರಾಗಿ ಬಿಡುಗಡೆ
ಈವರೆಗೆ ಜಿಲ್ಲೆಯಲ್ಲಿ 35,539 ಮಂದಿ ಗುಣಮುಖ