ಕುಂದಾಪುರ, ಮೇ 12 (DaijiworldNews/MS): ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಏ.11 ರ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕ ನಂಜಾ ನಾಯ್ಕ್ ಎನ್. ಅವರಿಗೆ ಪ್ರಭಾರ ಎಸ್ಐ ಪ್ರಕಾಶ ಸಾಲಿಯಾನ್ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಗಂಗೊಳ್ಳಿ ಎಸ್ಐ ಭೀಮಾಶಂಕರ ಎಸ್. ವರ್ಗಾವಣೆಗೊಂಡ ಬಳಿಕ ಖಾಲಿಯಿದ್ದ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ನಂಜಾ ನಾಯ್ಕ್ ಎನ್. ನಿಯುಕ್ತಿಗೊಂಡಿದ್ದಾರೆ. ನಂಜಾ ನಾಯ್ಕ್ ಅವರು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 6 ತಿಂಗಳು ಪ್ರೊಬೆಷನರಿ ಎಸ್ಐ ಆಗಿ, ಬಳಿಕ ಉಪನಿರೀಕ್ಷಕರಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮಾರು 2 ವರ್ಷ ಮತ್ತು ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.