ಮಂಗಳೂರು, ಮೇ 12 (DaijiworldNews/MS): ನಗರದ ಹೊರವಲಯದ ಅಡ್ಯಾರ್ ನಲ್ಲಿ ಮೇ 9 ರ ಭಾನುವಾರ ರಾತ್ರಿ ಯುವಕನ ಮದುವೆಗೆ ಸಂಬಂಧಿಸಿದಂತೆ ನೃತ್ಯ ಕೂಟ ಆಯೋಜಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಸಿದ್ದಕಟ್ಟೆಯ ಯುವತಿಯೊಂದಿಗೆ ಆಡ್ಯಾರ್ ನ ಯುವಕ ಮದುವೆ ವಧುವಿನ ಮನೆಯಲ್ಲಿ ನಡೆದಿತ್ತು. ಮದುವೆ ಮುಗಿಸಿದ ನಂತರ ಯುವಕರ ಮನೆಯಲ್ಲಿ ವಿವಾಹ ಔತಣ ಹಾಗೂ ನೃತ್ಯ ಕೂಟವನ್ನು ಏರ್ಪಡಿಸಲಾಗಿತ್ತು
ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ವರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಡ್ಯಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಕಾರ್ಯಕ್ರಮದವನ್ನು ಆಯೋಜಿಸಿದವರು ಕೊರೊನಾವೈರಸ್ ಸಂಬಂಧಿತ ನಿರ್ಬಂಧಗಳನ್ನು ಉಲ್ಲಂಘಿಸಿ ಪಾರ್ಟಿಯನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಡ್ಯಾನ್ಸ್ ಪಾರ್ಟಿಯ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿತ್ತು. ಈ ಸಂಗತಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರ ಗಮನಕ್ಕೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ.