ಹಾಸನ ಸೆ 26 (MSP): ಎಲ್ಲಾದರೂ ಹಿಂದೂ ಪರ ಕಾರ್ಯಕ್ರಮಗಳನ್ನು ಕೈಗೊಂಡರೆ ಸಾಕು, ಆ ಊರಿನ ಪುಢಾರಿ ರಾಜಕಾರಣಿಗಳು, ಕೆಲವು ಸ್ಥಳೀಯ ರಾಜಕಾರಣಿಗಳು, ನಮ್ಮ ಊರುನ್ನು ಮಂಗಳೂರು ಮಾಡುತ್ತೀರಾ ಎಂದು ಕೆಂಗಣ್ಣು ಬೀರುತ್ತಾ ಬೊಬ್ಬೆ ಹೊಡೆಯುತ್ತಾರೆ ಆದರೆ ಆ ಮೂಲಕವೇ ನಮ್ಮೂರನ್ನು ಪಾಕಿಸ್ತಾನ ಮಾಡಲು ಹೊರಟಂತಿದೆ ಎಂದು ತಿಳಿಯುವುದಿಲ್ಲ ಎಂದು ಆರ್ ಎಸ್ ಎಸ್ ಮುಖಂದ ಪುತ್ತೂರು ಸ್ವಾಮಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಲೂರು ತಾಲೂಕಿನ ಹಳೇಬೀಡಿನಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ತಾಲೂಕು ಬಂಜರಂಗದಳದಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಹಾಗೂ ಬಜರಂಗದಳ ಹಳೆಬೀಡು ಹೋಬಳಿ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ರಾಜಕೀಯವೇ ಬದುಕು ಹಾಗೂ ಬಂಡವಾಳ ಎನ್ನುವುದಿದ್ದರೆ ಅದನ್ನು ಮಾಡಲು ನಾವೇನು ಬೇಡ ಅನ್ನುವುದಿಲ್ಲ. ಆದರೆ ರಾಜಕಿಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ವೋಟ್ ಬ್ಯಾಂಕ್ ಸ್ವಾರ್ಥಕ್ಕಾಗಿ ಹಿಂದೂ ಪರ ಕಾರ್ಯಕ್ರಮಗಳ ಬಗ್ಗೆ ಟೀಕೆ ಮಾಡುವುದು ಎಷ್ಟು ಸರಿ? ಹಿಂದೂ ದೇವತೆಗಳ ಅವಹೇಳ ಮಾಡುವುದನ್ನು ಸಹಿಸಿಕೊಂಡು ನಾವು ಇರಬೇಕೆ? ಇದನ್ನು ಯಾಕೆ ಎಂದು ಪ್ರಶ್ನಿಸಿದರೆ ಸಾಕು ಕೋಮುವಾದದ ಹಣೆಪಟ್ಟಿ ಕಟ್ಟಲಾಗುತ್ತದೆ.
ಯಾರೇ ಆಗಲಿ ಹಿಂದೂ ಸಮಾಜ ದೇವರ ವಿರುದ್ದ ಮಾತನಾಡುವುದನ್ನು ನಾವು ಸಹಿಸುವುದಿಲ್ಲ. ಹಿಂದೂ ದೇಶ, ದೇವರ ಉಳಿವಿಗಾಗಿ ನಾವು ಜೈಲಿಗೆ ಹೋಗಲು ಸಿದ್ದರಿದ್ದೇವೆ. ಸ್ವಾತಂತ್ರ್ಯ ನಂತರ ಪಾಕಿಸ್ತಾನ ವಿಭಜನೆಗೆ ಅವಕಾಶ ಕೊಟ್ಟ ಪರಿಣಾಮ ಇಂದು ಜಗತ್ತಿನಾದ್ಯಂತ ಭಯೋತ್ಪಾನೆ ತಾಂಡವವಾಡುತ್ತಿದೆ. ಪಾಕಿಸ್ತಾನದಿಂದಾಗಿ ಇಡೀ ವಿಶ್ವದಲ್ಲೇ ನೆಮ್ಮದಿ ಇಲ್ಲದಂತಾಗಿದೆ. ದೇಶದ ಅಭಿವೃದ್ದಿ ಚಿಂತನೆಗಿಂತ ದೇಶದ ರಕ್ಷಣೆ ಉಳಿವಿನ ಬಗ್ಗೆ ಆತಂಕ ಮನೆ ಮಾಡಿದೆ ಎಂದರು. ಪುಷ್ಪಗಿರಿ ಮಠದ ಸ್ವಾಮೀಜಿ ಮಾತನಾಡಿ, ಇಂದು ಧರ್ಮ ಜಾತಿ ಹೆಸರಿನಲ್ಲಿ ಹಿಂದುಗಳನ್ನು ಒಡೆದು ಆಳುವ ನೀತಿ ಹೆಚ್ಚುತ್ತಿದೆ ಹಿಂದೂಗಳು ಎಚ್ಚರ ವಹಿಸದಿದ್ದರೆ ಭವಿಷ್ಯದಲ್ಲಿ ಹಿಂದುಗಳೇ ಅಲ್ಪ ಸಂಖ್ಯಾತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.