ಮಂಗಳೂರು, ಮೇ 09 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮತ್ತೆ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು, ನಿರ್ಬಂದಗಳೊಂದಿಗೆ ಪೂರ್ವ ನಿಗದಿಯಾದ ಮದುವೆ ಸಮಾರಂಭಗಳಿವೆ ಜಿಲ್ಲೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಕಳೆದ ವಾರ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಮಾರ್ಗಸೂಚಿಯಲ್ಲಿ ಮೇ 15ರ ಬಳಿಕ ಮದುವೆ ಸಮಾರಂಭಗಳಿದ್ದರೆ, ಅವುಗಳನ್ನು ಮುಂದೂಡುವಂತೆ ಆದೇಶ ನೀಡಿ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿತ್ತು. ಆದರೆ, ಇದೀಗ ಮತ್ತೆ ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಲಾಗಿದೆ.
ಜಿಲ್ಲಾಡಳಿತ ಮೇ 09ರಂದು ಬಿಡುಗಡೆಗೊಳಿಸಿದ ಮಾರ್ಗಸೂಚಿಯಲ್ಲಿ ಏನಿದೆ?
ಪೂರ್ವ ನಿಗದಿತ ಮದುವೆಗಳನ್ನು ನಡೆಸಬಹುದು
ಆದರೆ, 25 ಜನರಿಗಷ್ಟೇ ಭಾಗವಹಿಸಲು ಅವಕಾಶ
ಮನೆಯಲ್ಲೇ ಸರಳ ಸಮಾರಂಭ ನಡೆಸಬೇಕು
ಹಾಲ್, ಕಲ್ಯಾಣ ಮಂಟಪಗಳಲ್ಲಿ ಅನುಮತಿ ಇಲ್ಲ
ಸ್ಥಳೀಯಾಡಳಿತದಿಂದ ಸಮಾರಂಭಕ್ಕೆ ಅನುಮತಿ ಕಡ್ಡಾಯ
ಪಾಸ್ ಹೊಂದಿರುವ 25 ಜನರಿಗಷ್ಟೇ ಅನುಮತಿ
ಈ ಹಿಂದಿನ ಆದೇಶದಲ್ಲಿ ಮೇ 15ರ ಬಳಿಕ ಅನುಮತಿ ಇರಲಿಲ್ಲ
ಮೇ 15ರ ಬಳಿಕದ ಮದುವೆಗಳನ್ನು ಮುಂದೂಡಲು ಸೂಚಿಸಿತ್ತು