ಉಡುಪಿ, ಮೇ 09 (DaijiworldNews/SM): ಜಿಲ್ಲೆಯಲ್ಲಿ ಮೇ 10 ರಂದು 18ರಿಂದ 44 ವರ್ಷ ವಯೋಮಿತಿಯವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಆರಂಭಗೊಳ್ಳಲಿದ್ದು ಈಗಾಗಲೇ ನೋಂದಣಿ ಮಾಡಿಕೊಂಡು ಅವಕಾಶ ಖಾತರಿಯಾಗಿರುವ ವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಡಿಎಚ್ಒ ಡಾಕ್ಟರ್ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿಯ ಜಿಲ್ಲಾಸ್ಪತ್ರೆ, ಸೈಂಟ್ ಸಿಸಿಲಿಸ್ ಶಾಲೆ, ಕುಂದಾಪುರ ತಾಲೂಕು ಆಸ್ಪತ್ರೆ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಮೇ ೧೦ರ ಸೋಮವಾರ ಮಧ್ಯಾಹ್ನದಿಂದ ಆರಂಭಗೊಳ್ಳಲಿದೆ. ಈಗಾಗಲೇ ಲಸಿಕೆಗೆ ನೊಂದಣಿ ಮಾಡಿಕೊಂಡಿರುವವರಿಗೆ ಸೋಮವಾರ ಬೆಳಗ್ಗೆ ಮೊಬೈಲ್ ಗೆ ಸಂದೇಶ ಲಭಿಸಲಿದ್ದು, ಅಂತಹವರು ಮಾತ್ರ ಲಸಿಕೆ ಪಡೆಯಲು ಆಗಮಿಸುವಂತೆ ಡಿಎಚ್ಒ ಅವರು ತಿಳಿಸಿದ್ದಾರೆ