ಪಡುಬಿದ್ರಿ, ಮೇ. 09 (DaijiworldNews/HR): ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೀಡು ಬಳಿ ಮೀನು ಸಾಗಿಸುತ್ತಿದ್ದ ಲಾರಿ ರವಿವಾರ ಉರುಳಿದ ಘಟನೆ ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಲಾರಿಯ ಮುಂಭಾಗದ ಟಯರ್ ಸ್ಫೋಟಗೊಂಡಿದ್ದು ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೆ ಹೋಗಿ ಲಾರಿ ಪಲ್ಟಿಯಾಗಿ ರಸ್ತೆಯ ಬಿದ್ದಿದೆ ಎಂದು ಹೇಳಲಾಗುತ್ತದೆ.
ಲಾರಿ ಮಾಲ್ಪೆಯಿಂದ ಮೀನುಗಳನ್ನು ತೆಗೆದುಕೊಂಡು ಮಂಗಳೂರು ಕಡೆಗೆ ಹೋಗುತ್ತಿತ್ತು.
ಘಟನೆಯಲ್ಲಿ ಚಾಲಕ ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದು, ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.