ಕಡಬ, ಮೇ 09 (DaijiworldNews/MB) : ಇಲ್ಲಿನ ಆಲಂಕಾರು ಗ್ರಾಮದ ನಾಡ್ತಿಲ ಮೂಲದ ಉಮೇಶ್ ದೇವಾಡಿಗ ಅವರ ಪುತ್ರ, ನವವಿವಾಹಿತ ಯತೀಶ್ ಎನ್ ದೇವಾಡಿಗಾ ಅವರು ಮೇ 8 ರ ಶನಿವಾರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಯತೀಶ್ ದೇವಾಡಿಗ ಅವರು ಬೆಂಗಳೂರಿನಲ್ಲಿ ಐಟಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.
ಎರಡು ವಾರಗಳ ಹಿಂದೆ ಬೆಂಗಳೂರಿನಿಂದ ಮನಗೆ ಬಂದಿದ್ದ ಯತೀಶ್ ಅನಾರೋಗ್ಯಕ್ಕೆ ಒಳಗಾದ ನಂತರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಆದರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರಿನಲ್ಲಿ ದಾಖಲಿಸಲಾಯಿತು. ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಮೇ 8 ರ ಶನಿವಾರ ಸಾವನ್ನಪ್ಪಿದ್ದಾರೆ.