ಮಂಗಳೂರು, ಮೇ. 08 (DaijiworldNews/HR): ಲಭ್ಯವಿರುವ ಕೊರೊನಾ ಲಸಿಕೆ ಖಾಲಿಯಾಗಿರುವುದರಿಂದ ಮೇ 9 ರಿಂದ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯುವುದಿಲ್ಲ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ ಲಭ್ಯವಿರುವ ಲಸಿಕೆಯನ್ನು ಮೇ 8 ರ ಶನಿವಾರ ನೀಡಲಾಯಿತು.
ಜಿಲ್ಲೆಗೆ ಕೊರೊನಾ ಲಸಿಕೆ ಬಂದ ನಂತರ ಲಸಿಕೆ ನೀಡುವ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಜಿಲ್ಲೆಗೆ ಶುಕ್ರವಾರ 3,400 ಲಸಿಕೆಗಳ ಬಾಟಲುಗಳು ಬಂದಿದ್ದು, ಕೇಂದ್ರಗಳಲ್ಲಿ ಜನರು ಸರತಿ ಸಾಲುಗಳಲ್ಲಿ ನಿಂತು ಲಸಿಕೆಗಾಗಿ ಪಡೆದುಕೊಂಡಿದ್ದಾರೆ.