ಮಂಗಳೂರು, ಮೇ.08 (DaijiworldNews/PY): ನಗರದ ವೆನ್ಲಾಕ್ ಆಸ್ಪತ್ರೆಯ ಮುಂಭಾಗ ಕೊರೊನಾ ಲಸಿಕೆಗಾಗಿ ನೂರಾರು ಮಂದಿ ಸರದಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂದಿದೆ.
ಕಟ್ಟುನಿಟ್ಟಾದ ಲಾಕ್ಡೌನ್ ನಿಯಮಗಳನ್ನು ಜಾರಿ ಮಾಡಿದ್ದರೂ, ಈ ನಡುವೆ ಜನರು ಕೊರೊನಾ ಲಸಿಕೆಗಾಗಿ ಆಸ್ಪತ್ರೆಯ ಮುಂದೆ ಕಾದು ನಿಂತಿದ್ದಾರೆ.
ದಾಯ್ಜಿವಲ್ಡ್ ಜೊತೆ ಮಾತನಾಡಿದ ಲಸಿಕಾ ಅಭಿಯಾನದ ಅಧಿಕಾರಿ ಡಾ.ರಾಜೇಶ್, "ನಾವು ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ನೀಡುತ್ತಿದ್ದೇವೆ. ನಿನ್ನೆ ನಾವು 3,400 ಕೋವಿಶೀಲ್ಡ್ ಲಸಿಕೆಗಳನ್ನು ಪಡೆದಿದ್ದು, ಹಾಗಾಗಿ ನಾವು ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ವೆನ್ಲಾಕ್ನಲ್ಲಿ 380 ಡೋಸ್ಗಳಿವೆ. ಈ ಪೈಕಿ ಉಳ್ಳಾಲಕ್ಕೆ 180 ಲಸಿಕೆಗಳನ್ನು, ಸುರತ್ಕಲ್, ಮುಲ್ಕಿ ಹಾಗೂ ಮೂಡುಬಿದಿರೆಯ ಆರೋಗ್ಯ ಕೇಂದ್ರಕ್ಕೆ ತಲಾ 200 ಡೋಸ್ಗಳನ್ನು ಕಳುಹಿಸಿದ್ದೇವೆ. ಉಳಿದ ಡೋಸ್ಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳಿಗೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.