ಅಮೇಥಿ, ಸೆ 25 (MSP): ಪ್ರಧಾನಿ ಮೋದಿ ದೇಶವನ್ನು ಕಾಯುವ ಕಾವಲುಗಾರನಲ್ಲ, ಆತ ದೇಶವನ್ನು ಕೊಳ್ಳೆ ಹೊಡೆಯುವ ದರೋಡೆಕೋರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಆರೋಪಿಸಿದ್ದಾರೆ. ಅವರು ತಮ್ಮ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಮೋದಿ ಒಬ್ಬ ದರೋಡೆಕೋರ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಮೋದಿ ನೇತೃತ್ವದ ಸರ್ಕಾರದ ಬಣ್ಣ ಬಯಲು ಮಾಡಲಿದೆ. ಸರ್ಕಾರದ ಪ್ರತಿಯೊಂದು ಹೆಜ್ಜೆಗಳು, ಪ್ರತಿ ನಿರ್ಧಾರಗಳು ಹೇಗೆ ಕಳ್ಳದಾರಿಯದ್ದಾಗಿದೆ ಎಂಬುದನ್ನು ನಮ್ಮ ಪಕ್ಷವು ದೇಶದ ಜನತೆಯ ಮುಂದೆ ಬಹಿರಂಗಪಡಿಸಲಿದೆ ಎಂದಿದ್ದಾರೆ.
ಇದಲ್ಲದೆ ಪ್ರಧಾನಿ ಮೋದಿ ಫೈಟರ್ ಜೆಟ್ ರಫೇಲ್ ಡೀಲ್ನಲ್ಲಿ ಪ್ರಧಾನಿ ಮೋದಿ ಅನಿಲ್ ಅಂಬಾನಿಗೆ ಯಾವ ರೀತಿ ಲಾಭ ಮಾಡಿಕೊಟ್ಟಿದ್ದಾರೆ ಎಂಬುದನ್ನು ತೋರಿಸುತ್ತೇವೆ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿ ಅಧಿಕಾರ ಬಂದ ಬಿಜೆಪಿಯೂ ತನ್ನ ಕೈಯಾರೆ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಕೇವಲ ಮೂರು ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಎಲ್ಲ ಹಗರಣಗಳನ್ನ ಒಂದೊದಾಗಿಯೇ ಬಯಲಿಗೆಳೆಯಲಾಗುವುದು, ನೋಟ್ ಬ್ಯಾನ್, ರಫೇಲ್ ಡೀಲ್, ವಿಜಯ್ ಮಲ್ಯ, ಲಲಿತ್ ಮೋದಿ, ಜಿಎಸ್ ಟಿ ಟ್ಯಾಕ್ಸ್ ಇವೆಲ್ಲ ಕೇಂದ್ರ ಸರ್ಕಾರದ ದರೋಡೆಕೋರತನದ ಯೋಜನೆಗಳಾಗಿವೆ ಎಂದು ದೂರಿದರು.