ನ್ಯೂಢೆಲ್ಲಿ ಅ6:ನಿಮಗೆ ಪೋಸ್ಟ್ ಅಫೀಸಿನಲ್ಲಿ ಹೂಡಿಕೆಯಿದೆಯೇ ? ಪಿಪಿಎಫ್ ಹಾಗೂ ನೇಶನಲ್ ಸೇವೆಂಗ್ಸ್ ಸರ್ಟೀಫಿಕೇಟ್ ಸ್ಕೀಂ ಮೊದಲಾದುವುಗಳಲ್ಲಿ ಹಣ ಹೂಡಿಕೆಯಿದೆಯೇ? ಇದ್ದಲ್ಲಿ ತಡಮಾಡದೆ ನಿಮ್ಮ ಅಂಚೆ ಕಚೇರಿಗೆ ತೆರಳಿ ನಿಮ್ಮ ಅಧಾರ್ ನಂಬರ್ ಧಾಕಲಿಸಿಕೊಳ್ಳಬೇಕಾಗಿದೆ.
ಕೇಂದ್ರ ಸರ್ಕಾರವು ಅಂಚೆ ಕಛೇರಿಯಲ್ಲಿನ ಎಲ್ಲಾ ರೀತಿಯ ನಿಕ್ಷೇಪಗಳಿಗೂ ಅಧಾರ್ ಕಾರ್ಡ್ ಕಡ್ಡಾಯ ಎಂಬ ಅಧಿಸೂಚನೆಯನ್ನು ಹೊರಡಿಸಿದೆ. ಅಧಾರ್ ಕಾರ್ಡ್ ನಮೂದಿಸಿಕೊಳ್ಳಲು ಡೆಸೆಂಬರ್ 31 ನೇ ತಾರೀಕು ಅಂತಿಮ ಗಡುವಾಗಿ ನಿಗದಿಪಡಿಸಲಾಗಿದೆ.
ಪಬ್ಲಿಕ್ ಪ್ರೊವಿಡೆಂಟ್ ಫಂಡ್, ಎನ್ ಎಸ್ ಸಿ, ಕಿಸಾನ್ ವಿಕಾಸ್ ಪತ್ರ್ ಮೊದಲಾದುವುಗಳಲ್ಲಿ ಹೊಸತಾಗಿ ಹೂಡಿಕೆ ನಡೆಸುವವರು ಸಹ ತಪ್ಪದೆ ಅಧಾರ್ ಕಾರ್ಡ್ ನಂಬರ್ ನಮೂದಿಸಬೇಕು ಎಂದು ಸರಕಾರವು ಅದೇಶ ಹೊರಡಿಸಿದೆ.
ಅಧಾರ್ ಕಾರ್ಡ್ ದೊರಕದವರು ಅಧಾರ್ ಎನ್ರೋಲ್ ಮಾಡಿದ ವಿವರಗಳನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ.
ಈ ಮೊದಲು ಬ್ಯಾಂಕ್ ವ್ಯವಹಾರಗಳಿಗೆ ಹಾಗೂ ಹೊಸ ಮೊಬೈಲ್ ಸಂಪರ್ಕಗಳಿಗೆ ಸರಕಾರವು ಅಧಾರ್ ಕಡ್ಡಾಯಗೊಳಿಸಿತ್ತು.