ಬಜಪೆ, ಮೇ 07 (DaijiworldNews/MS): ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರನೊಬ್ಬನನ್ನು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ್ ನಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬಂದಿ ತಡೆದಾಗ ಆತ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ದಿಪಡಿಸಿರುವ ಬಗ್ಗೆ ಗುರುವಾರ ದೂರು ದಾಖಲಾಗಿದೆ.
ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿಯ ಅಹಮ್ಮದ್ ಹಾಲಿಕ್ ಯಾನೆ ಅಬ್ದುಲ್ ಹಾಲಿಕ್ (24) ಆರೋಪಿಯಾಗಿದ್ದು , ಆತನ ವಿರುದ್ದ ಬಜಪೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಮಿಕ ರೋಗಗಳ ಅಧ್ಯಾದೇಶ-2020 ಉಲ್ಲಂಘನೆ ಮತ್ತು ವಿಪತ್ತು ಕಾರ್ಯ ನಿರ್ವಹಣ ಕಾಯ್ದೆ- 2005 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಾಲಯದಲ್ಲಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.