ಕುಂದಾಪುರ, ಸೆ 24(SM): ಜ್ಯುವೆಲ್ಲರಿ ಮಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರದ ಅನಗಳ್ಳಿ ಸೇತುವೆ ಬಳಿ ನಡೆದಿದೆ. ಶ್ರೀನಿವಾಸ್ ಶೇಟ್(57) ಆತ್ಮಹತ್ಯೆ ಮಾಡಿಕೊಂಡವರು.
ಕುಂದಾಪುರದ ಅನಗಳ್ಳಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ ಶೇಟ್ ಕುಂದಾಪುರದ ವಿಜಯಾ ಜ್ಯುವೆಲ್ಲರಿ ಮಾಲಕರಾಗಿದ್ದರು. ಶ್ರೀನಿವಾಸ್ ಗೆ ತಮ್ಮ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಇದರಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.