ಕೊಣಾಜೆ, ಸೆ 24(SM): ಪ್ರೇಮ ವೈಫಲ್ಯದ ಕಾರಣ ಮನನೊಂದು ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವಿನಲ್ಲಿ ನಡೆದಿದೆ.
ದಾವಣಗೆರೆ ಹರಪನಹಳ್ಳಿ ಬೂದಿಹಾಳ ನಿವಾಸಿ ರೂಪ(19)ಆತ್ಮಹತ್ಯೆ ಮಾಡಿಕೊಂಡ ಯುವತಿ.
ನಡುಪದವಿನ ಚಿಕ್ಕಮ್ಮನ ಮನೆಯಲ್ಲಿ ಸೋಮವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಳೆ. ರೂಪ ಪಿಯುಸಿ ವ್ಯಾಸಂಗವನ್ನು ಮುಡಿಪುವಿನ ಸರಕಾರಿ ಕಾಲೇಜಿನಲ್ಲಿ ಮುಗಿಸಿದ್ದಳು. ಸೋಮವಾರ ಬೆಳಿಗ್ಗೆ ದಾವಣಗೆರೆಯಿಂದ ಚಿಕ್ಕಮ್ಮನ ಮನೆಗೆ ಆಗಮಿಸಿದ್ದಳೆನ್ನಲಾಗಿದೆ. ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯಗೈದಿರುವುದಾಗಿ ತಿಳಿದು ಬಂದಿದೆ. ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.